Saturday, August 15, 2026
spot_imgspot_img
spot_imgspot_img

ಕುಂದಾಪುರ: ಸ್ಕೂಟರ್‌ಗೆ ಮಿನಿ ಬಸ್ ಡಿಕ್ಕಿ; ಕೇಬಲ್‌ ಅಪರೇಟರ್‌ ಸಾವು..!

- Advertisement -
- Advertisement -

ಕುಂದಾಪುರ: ಸ್ಕೂಟರ್‌ಗೆ ಮಿನಿ ಬಸ್ಸೊಂದು ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಕೇಬಲ್‌ ಅಪರೇಟರ್‌ ಮೃತಪಟ್ಟ ಘಟನೆ ಕುಂದಾಪುರ ತಲ್ಲೂರಿನಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿ ತಲ್ಲೂರು ಗರಡಿ ಸಮೀಪದ ನಿವಾಸಿ ಶೇಖರ್‌ ಪೂಜಾರಿ ಯಾನೆ ಚಂದ್ರಶೇಖರ್‌ ಪೂಜಾರಿ (52) ಎಂದು ಗುರುತಿಸಲಾಗಿದೆ.

ಕಳೆದ ಭಾನುವಾರ ಮಧ್ಯಾಹ್ನ ತಲ್ಲೂರು ಸರ್ಕಲ್‌ ಬಳಿ ಶೇಖರ್‌ ಪೂಜಾರಿ ಅವರ ಸ್ಕೂಟರಿಗೆ ಮಿನಿ ಬಸ್ಸೊಂದು ಢಿಕ್ಕಿ ಹೊಡೆದಿದೆ. ಪರಿಣಾಮ ಶೇಖರ್‌ ಪೂಜಾರಿಯವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

- Advertisement -

Related news

error: Content is protected !!