Saturday, June 13, 2026
spot_imgspot_img
spot_imgspot_img

ಕುಂದಾಪುರ: ಈಜಲು ತೆರಳಿದ್ದ ಮೂವರು ಬಾಲಕರು ನೀರುಪಾಲು

- Advertisement -
- Advertisement -

ಕುಂದಾಪುರ: ಈಜಲು ತೆರಳಿದ್ದ ನಾಲ್ವರು ಬಾಲಕರಲ್ಲಿ ಮೂವರು ನೀರುಪಾಲಾಗಿ ಓರ್ವ ಅಪಾಯದಿಂದ ಪಾರಾದ ಘಟನೆ ಕಿರಿಮಂಜೇಶ್ವರ ಗ್ರಾಮದ ನಾಗೂರು ಸಮೀಪದ ಹೊಸಹಿತ್ಲು ಬೀಚ್‌ನಲ್ಲಿ ನಡೆದಿದೆ.

ಮೃತಪಟ್ಟವರನ್ನು ಸಂಕೇತ್ (16), ಸೂರಜ್ (15), ಆಶೀಶ್ (14) ಎಂದು ಗುರುತಿಸಲಾಗಿದೆ.

ಆಶೀಶ್ ದೇವಾಡಿಗನ ಸಹೋದರ ಕೌಶಿಕ್ ದೇವಾಡಿಗ ಈಜಿ ದಡ ಸೇರಿದ್ದಾನೆ. ನಾಲ್ವರು ಈಜಲೆಂದು ಸಮುದ್ರಕ್ಕಿಳಿದ್ದಿದ್ದು, ಅಲೆಗಳ ಹೊಡೆತಕ್ಕೆ ಸಿಲುಕಿ ಮೂವರು ಕೊಚ್ಚಿ ಹೋಗಿದ್ದಾರೆ. ಓರ್ವ ಹರಸಾಹಸದಿಂದ ಈಜಿ ದಡ ಸೇರಿದ್ದಾನೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು ವಿದ್ಯಾರ್ಥಿಗಳ ಪತ್ತೆಗೆ ಮುಂದಾಗಿದ್ದು, ಮುಳುಗುತಜ್ಞರು, ಕರಾವಳಿ ಕಾವಲು ಪಡೆ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಸಹಕರಿಸಿದರು.

- Advertisement -

Related news

error: Content is protected !!