ತುಮಕೂರು: ಕುಣಿಗಲ್ ಕ್ಷೇತ್ರದ ಶಾಸಕ ಡಾ.ರಂಗನಾಥ್ ಅವರಿಗೆ ಕರೊನಾ ಸೋಂಕು ತಗುಲಿದ್ದು,ರಾಜ್ಯ- ರಾಷ್ಟ್ರಮಟ್ಟದ ಕಾಂಗ್ರೆಸ್ ವಲಯದಲ್ಲೂ ಆತಂಕ ಶುರುವಾಗಿದೆ.ಜು.5ರ ಭಾನುವಾರ ಕೊರೊನಾ ತಪಾಸಣೆಗೆ ಒಳಗಾಗಿದ್ದರು. ಜು.6ರ ಸೋಮವಾರ ಅವರ ವರದಿ ಬಂದಿದ್ದು, ಸೋಂಕು ತಗಲಿರುವುದು ದೃಢಪಟ್ಟಿದೆ. ಈ ಬಗ್ಗೆ ಮಾತನಾಡಿದ ಶಾಸಕರು, “ಸಾಕಷ್ಟು ಎಚ್ಚರಿಕೆ ವಹಿಸಿದ ಬಳಿಕವೂ ಸೋಂಕು ತಗಲಿದೆ. ಆದ್ದರಿಂದ ಜನರು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ನಾನು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗುತ್ತಿದ್ದೇನೆ. ಕ್ಷೇತ್ರದ ಜನತೆ ನನ್ನ ಬಗ್ಗೆ ಚಿಂತಿಸುವುದು ಬೇಡ’ ಎಂದಿದ್ದಾರೆ.
ಶಾಸಕರಿಗೆ ಸೋಂಕು ದೃಢಪಟ್ಟ ವಿಚಾರ ಗೊತ್ತಾಗುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ್ದ ಮತ್ತು ಶಾಸಕರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರಲ್ಲೂ ಆತಂಕ ಶುರುವಾಗಿದೆ. . ಎರಡು ದಿನಗಳ ಹಿಂದಷ್ಟೇ ತಾಲೂಕಿನಲ್ಲಿ ಕರೊನಾ ಸೋಂಕು ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಲಾಕ್ಡೌನ್ ಜಾರಿ ಕುರಿತು ಕುಣಿಗಲ್ ಪಟ್ಟಣದಲ್ಲೂ ಶಾಸಕರು ಸಭೆ ನಡೆಸಿದ್ದರು.ಈ ವೇಳೆ ತಹಸೀಲ್ದಾರ್ ಮತ್ತು ಇಒ ಅವರು ಶಾಸಕರ ಅಕ್ಕಪಕ್ಕದಲ್ಲಿದ್ದರು. ಈಗ ಅವರು ಕೂಡ ಕ್ವಾರಂಟೈನ್‌ಗೆ ಒಳಗಾಗಲಿದ್ದು, ಇಡೀ ತಾಲೂಕು ಆಡಳಿತವೇ ಸ್ತಬ್ಧವಾಗಲಿದೆ.