Saturday, April 20, 2024
spot_imgspot_img
spot_imgspot_img

ಲೇಡಿಗೋಷನ್ ಹೆರಿಗೆ ಆಸ್ಪತ್ರೆಯ ಹೈ ರಿಸ್ಕ್ ಡೆಲಿವರಿ ವಾರ್ಡ್ ಕಟ್ಟಡ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ :ಕಾಮತ್

- Advertisement -G L Acharya panikkar
- Advertisement -

ಲೇಡಿಗೋಷನ್ ಹೆರಿಗೆ ಆಸ್ಪತ್ರೆಯ ಹೈ ರಿಸ್ಕ್ ಡೆಲಿವರಿ ವಾರ್ಡ್ ಕಟ್ಟಡ ನಿರ್ಮಾಣ ಕಾಮಗಾರಿಗೆ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅವರು ಗುದ್ದಲಿಪೂಜೆ ನೆರವೇರಿಸಿದರು.ಬಳಿಕ ಮಾತನಾಡಿದ ಶಾಸಕ ಕಾಮತ್, ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಜನರು ಹೆರಿಗೆಗೆ ಲೇಡಿಗೋಷನ್ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ. ಆಸ್ಪತ್ರೆಗೆ ಹೈರಿಸ್ಕ್ ಡೆಲಿವರಿ ವಾರ್ಡಿನ‌ ಅವಶ್ಯಕತೆಯ ಕುರಿತು ಆಸ್ಪತ್ರೆಯ ವೈದ್ಯಾಧಿಕಾರಿಗಳ ಮನವಿಯ ಮೇರೆಗೆ 2 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಯೋಜಿತ‌ ಕಟ್ಟಡವನ್ನು ಆಸ್ಪತ್ರೆಗೆ ಸಂಬಂಧಿಸಿದ ಹಳೇ ಕಟ್ಟಡವನ್ನು ಕೆಡವಿ ನಿರ್ಮಿಸಲು ಉದ್ಧೇಶಿಸಲಾಗಿದೆ. ಕಟ್ಟಡದಲ್ಲಿ 7 beded HDU unit, 4 beded ICU unit, 2 beded isolation rooms, linens store, nursing incharge store, therapeutic diet, critical equipment & point of care lab, dirty utility,bedpan cleaning area, rooms – 2nos,1.20 wide dirty corridor ಇರಲಿದೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ದಿವಾಕರ್ ಪಾಂಡೇಶ್ವರ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅದ್ಯಕ್ಷ ರವಿಶಂಕರ್ ಮಿಜಾರ್, ಪಾಲಿಕೆ ಸ್ಥಳೀಯ ಸದಸ್ಯರಾದ ಪೂರ್ಣಿಮಾ, ಪಾಲಿಕೆ ಸದಸ್ಯರಾದ ಜಗದೀಶ್ ಶೆಟ್ಟಿ ಬೇಳೂರು, ಬಿಜೆಪಿ ಮುಖಂಡರಾದ ಮುರಳೀಧರ್ ನಾಯಕ್, ರಮೇಶ್ ಹೆಗ್ಡೆ, ಭಾಸ್ಕರ್ ಚಂದ್ರ‌ ಶೆಟ್ಟಿ,ಗಿರೀಶ್, ಲೇಡಿಗೋಷನ್ ಆಸ್ಪತ್ರೆಯ ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು

- Advertisement -

Related news

error: Content is protected !!