Thursday, June 25, 2026
spot_imgspot_img
spot_imgspot_img

ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಬೆಂಕಿ ಹಚ್ಚಿದ ಅಪ್ಪ-ಮಗ!

- Advertisement -
- Advertisement -

ಲಕ್ನೋ: ಮನೆಗೆ ಹೋಗುತ್ತಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ನಂತರ ಅಪ್ಪ-ಮಗ ಆಕೆಗೆ ಬೆಂಕಿ ಹಚ್ಚಿರುವ ಘಟನೆ ಉತ್ತರ ಪ್ರದೇಶದ ಮಿಶ್ರಿತ್ ಪ್ರದೇಶದಲ್ಲಿ ನಡೆದಿದೆ. ಸದ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಮಹಿಳೆಯನ್ನು ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತಂತೆ ಮಾತನಾಡಿದ ಸೀತಾಪುರ ಪೊಲೀಸ್ ವರಿಷ್ಠಾಧಿಕಾರಿ ಆರ್ ಪಿ ಸಿಂಗ್, ನೈಮಿಶರಣ್ಯದ ಮಿಶ್ರಿಖ್ ಪ್ರದೇಶದಲ್ಲಿ 30 ವರ್ಷದ ಮಹಿಳೆ ಮೇಲೆ ವ್ಯಕ್ತಿಗಳಿಬ್ಬರು ಅತ್ಯಾಚಾರ ನಡೆಸಿ ಬೆಂಕಿ ಹಚ್ಚಿದ್ದಾರೆ ಎಂದು 112 ತುರ್ತು ಸೇವೆ ಮಾಹಿತಿ ನೀಡಿದೆ. ಮಹಿಳೆ ಸಿಧೌಲಿ ಪ್ರದೇಶದಲ್ಲಿರುವ ತಾಯಿ ಮನೆಯಿಂದ ಹಿಂದಿರುಗಿ ಹೋಗುತ್ತಿದ್ದ ವೇಳೆ ಆರೋಪಿಯೊಬ್ಬನ ಬಳಿ ಲಿಫ್ಟ್ ಪಡೆದಿದ್ದಾಳೆ.

ಈ ವೇಳೆ ಘಟನೆ ಸಂಭವಿಸಿದ್ದು, ಸದ್ಯ ಮಹಿಳೆಯನ್ನು ಚಿಕಿತ್ಸೆಗೆ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ವೇಳೆ ಮಹಿಳೆಯ ದೇಹ ಶೇ.30ರಷ್ಟು ಹ ಬೆಂಕಿಗಾಹುತಿಯಾಗಿದ್ದು, ಪ್ರಾಣಾಪಾಯದಿಂದ ಮಹಿಳೆ ಪಾರಾಗಿದ್ದಾಳೆ ಎಂದು ಹೇಳಿದ್ದಾರೆ. ಪ್ರಕರಣ ಸಂಬಂಧಿಸಿದಂತೆ ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.

- Advertisement -

Related news

error: Content is protected !!