Saturday, April 27, 2024
spot_imgspot_img
spot_imgspot_img

ಬಾನಂಗಳದಲ್ಲಿ ಚಂದ್ರಮನ ಬೆಳಕಿನಾಟ: ವರ್ಷದ ಕೊನೆಯ ಚಂದ್ರಗ್ರಹಣ

- Advertisement -G L Acharya panikkar
- Advertisement -

ನವದೆಹಲಿ: ವರ್ಷದ ನಾಲ್ಕನೇ ಮತ್ತು ಕೊನೆಯ ಚಂದ್ರಗ್ರಹಣ ( ಸೋಮವಾರ) ಸಂಭವಿಸಲಿದೆ. ಹಿಂದಿನ ಚಂದ್ರಗ್ರಹಣಗಳಂತೆ ಇದು ಒಂದು ಪೆಂಬ್ರೋಲ್ ಚಂದ್ರಗ್ರಹಣವಾಗಿದೆ. ಅಂದರೆ ಭೂಮಿ ಸೂರ್ಯ ಮತ್ತು ಚಂದ್ರನ ನಡುವೆ ಬರುತ್ತದೆ ಮತ್ತು ನೈಸರ್ಗಿಕ ಉಪಗ್ರಹವು ಭೂಮಿಯ ಹೊರಛಾಯೆಯ ಮೂಲಕ ಹಾದು ಹೋಗುತ್ತದೆ.

ಭಾರತದಲ್ಲಿ ಮಧ್ಯಾಹ್ನ 1:04 ಕ್ಕೆ ಗ್ರಹಣ ಸಂಭವಿಸಲಿದ್ದು. ಸಂಜೆ 5.22ಕ್ಕೆ ಕೊನೆಗೊಳ್ಳಲಿದೆ. ಗ್ರಹಣದ ಶಿಖರವು ಮಧ್ಯಾಹ್ನ 3:13 ಕ್ಕೆ ಸಂಭವಿಸಲಿದೆ.

ಸಮಯ ಮತ್ತು ದಿನಾಂಕದ ಪ್ರಕಾರ, 2020ನೇ ವರ್ಷದ ಕೊನೆಯ ಚಂದ್ರಹ್ರಗಣವು ಉತ್ತರ ಅಮೆರಿಕ, ಆಸ್ಟ್ರೇಲಿಯಾ ಮತ್ತು ಏಷ್ಯಾದ ಕೆಲವು ಭಾಗಗಳಲ್ಲಿ ಗೋಚರವಾಗುತ್ತದೆ. ನವೆಂಬರ್ 30ರಂದು ಸಂಭವಿಸುವ ಚಂದ್ರಗ್ರಹಣವು 4 ಗಂಟೆ 21 ನಿಮಿಷ ಗೋಚರವಾಗುತ್ತದೆ. ಗ್ರಹಣದ ಒಂದು ಭಾಗ ಮಾತ್ರ ಭಾರತದಲ್ಲಿ ಗೋಚರವಾಗುತ್ತದೆ.

ಈ ಚಂದ್ರಗ್ರಹಣದ ಸಂದರ್ಭದಲ್ಲಿ ಚಂದ್ರ ವೃಷಭ ರಾಶಿ ರೋಹಿಣಿ ನಕ್ಷತ್ರದಲ್ಲಿರ್ತಾನೆ. ಈ ಚಂದ್ರಗ್ರಹಣ ನಮ್ಮಲ್ಲಿ ಗೋಚರಿಸಲ್ಲ. ಯಾಕಂದ್ರೆ ಚಂದ್ರಗ್ರಹಣವಾಗುವ ಸಮಯದಲ್ಲಿ ಭಾರತದಲ್ಲಿ ಸೂರ್ಯೋದಯವಾಗಿರುತ್ತೆ. ಆದರೆ ಗ್ರಹಣದ ಪ್ರಭಾವ ಮಾತ್ರ ಇದ್ದೇ ಇರುತ್ತೆ ಅಂತಾ ಹೇಳಲಾಗುತ್ತಿದೆ.

- Advertisement -

Related news

error: Content is protected !!