Tuesday, April 20, 2021
spot_imgspot_img
spot_imgspot_img

ವಿಟ್ಲ: ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದವನನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಪೊಲೀಸರು

ವಿಟ್ಲ: ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದವನನ್ನು ವಿಟ್ಲ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಆರೋಪಿಯನ್ನು ನಾಸಿರ್ ಎಂದು ಗುರುತಿಸಲಾಗಿದೆ.

ವಿಟ್ಲ ಪೊಲೀಸ್ ಠಾಣೆಯ ಪಿಎಸ್‌ಐ ವಿನೋದ್ ರೆಡ್ಡಿ ನೇತೃತ್ವದ ತಂಡ ವಿಟ್ಲದ ಕೊಡಂಗಾಯಿ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿರುವ ಸಮಯ ಸಾಲೆತ್ತೂರು ಕಡೆಯಿಂದ ಬಂದ ಒಂದು ಬಿಳಿ ಬಣ್ಣದ ಮಾರುತಿ ಆಲ್ಟೋ 800 ಕಾರನ್ನು ಸಿಬ್ಬಂದಿಗಳ ಸಹಾಯದಿಂದ ನಿಲ್ಲಿಸಿದ್ದಾರೆ. ತಪಾಸಣೆ ಮಾಡುತ್ತಿರುವ ಸಮಯ ಕಾರಿನಲ್ಲಿ ಚಾಲಕ ಮಾತ್ರ ಇದ್ದು, ಕಾರಿನ ಹಿಂಬದಿ ಸೀಟಿನಲ್ಲಿ ಒಂದು ಪ್ಲಾಸ್ಟಿಕ್ ಕವರಿನಲ್ಲಿ ತುಂಬಿಸಿದ್ದ ಕಟ್ಟನ್ನು ಗಮನಿಸಿದ ಪೊಲೀಸರು ಏನು ಎತ್ತ ವಿಚಾರಿಸಿದಾಗ ಗಾಂಜಾ ಇರುವುದು ಕಂಡುಬ0ದಿದೆ.


ಗಾಂಜಾ ಸಾಗಾಟ ಮಾಡಲು ಪರವಾನಿಗೆ ಇದೆಯೇ ಎಂದು ಕೇಳಿದಾಗ ಯಾವುದೇ ರೀತಿಯ ಪರವಾನಿಗೆ ಇರುವುದಿಲ್ಲವಾಗಿ ತಿಳಿಸಿದನು. ತಾನು ಅಕ್ರಮವಾಗಿ ಗಾಂಜಾವನ್ನು ವಿಟ್ಲ, ಬಿ.ಸಿ ರೋಡ್ ಕಡೆಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದು, ಅದರಲ್ಲಿ ಸುಮಾರು 2 ಕೆಜಿ ಯಷ್ಟು ಗಾಂಜಾ ಇರುವುದಾಗಿಯೂ ನನಗೆ ಬಾರಿಕ್ ಹಾಗೂ ಮುಸ್ತಾಫ ಎಂಬವರು ಹೆಚ್ಚಿನ ಬೆಲೆಗೆ ಗಿರಾಕಿಗಳಿಗೆ ಮಾರಾಟ ಮಾಡುವ ಉದ್ದೇಶದಿಂದ ನೀಡಿರುವುದಾಗಿ ತಿಳಿಸಿರುತ್ತಾನೆ.ಆರೋಪಿಯನ್ನು ಬಂಧಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

MOST POPULAR

HOT NEWS

Related news

error: Content is protected !!