Friday, April 26, 2024
spot_imgspot_img
spot_imgspot_img

ವಿವಾದಿತ ಗೋಡೆ ಬರಹ ಪ್ರಕರಣ: ಆರೋಪಿಗಳ ಪರ ವಕಾಲತ್ತು ವಹಿಸದಂತೆ ವಕೀಲರ ಸಂಘ ಮನವಿ.

- Advertisement -G L Acharya panikkar
- Advertisement -

ಮಂಗಳೂರು: ಇತ್ತೀಚಿನ ದಿನಗಳಲ್ಲಿ ಮಂಗಳೂರು ನಗರದ ಹಲವಾರು ಕಡೆಗಳಲ್ಲಿ ಹಾಗೂ ಕೋರ್ಟ್ ಆವರಣದ ಗೊಡೆಗಳಲ್ಲಿ ಜಿಹಾದಿ ಹಾಗೂ ದೇಶದ್ರೋಹಿ ಬರಹಗಳು ಕಂಡುಬಂದಿದ್ದು ಹಾಗೂ ಈ ಬಗ್ಗೆ ಹಲವು ಸಂಘ-ಸಂಸ್ಥೆಗಳು ಹಾಗೂ ವಕೀಲರ ಮಿತ್ರರು ಮನವಿಯನ್ನು ನೀಡಿ, ಸಂಘದ ಸದಸ್ಯರು ಯಾರು ಕೂಡ ಇಂಥಹ ದೇಶದ್ರೋಹ ಹಾಗೂ ಉಗ್ರಗಾಮಿ ಚಟುವಟಿಕೆ  ಕೃತ್ಯದಲ್ಲಿ ಭಾಗಿಯಾದವರಿಗೆ ಕಾನೂನು ರಕ್ಷಣೆ ಹಾಗೂ ವಕಾಲತ್ತು ವಹಿಸದಂತೆ ನಿರ್ಣಯ ತೆಗೆದುಕೊಳ್ಳಲು ಕೊರಿ ಕೊಂಡಿರುತ್ತಾರೆ.


ಅದರಂತೆ ದಿನಾಂಕ ೦7 -12 -2020 ರಂದು ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಎಂ ನರಸಿಂಹ ಹೆಗಡೆ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕಾರಿಣಿ ಸಭೆ ಸೇರಿ, ಕೂಲಂಕುಷವಾಗಿ ಚರ್ಚಿಸಿ ಈ ಕೆಳಗಿನಂತೆ ಸರ್ವಾನುಮತದಿಂದ ನಿರ್ಣಯಿಸಲಾಯಿತು.
‘ನಿರ್ಣಯ’ ‘ ದೇಶದ್ರೋಹ ಕೃತ್ಯಗಳಿಗೆ ಹಾಗೂ ಉಗ್ರಗಾಮಿ ಚಟುವಟಿಕೆಗೆ ಸಹಕಾರ ಮಾಡುವಂತಹ ಯಾವುದೇ ಕೃತ್ಯವನ್ನು ಎಸಗಿದ್ದು ಆರೋಪಿಗಳಿಗೆ ಮಂಗಳೂರು ವಕೀಲರ ಸಂಘದ ಸದಸ್ಯರು ಕಾನೂನು ಸೇವೆ/ ಸಹಕಾರ ಹಾಗೂ ಆರೋಪಿಯ ಪರವಾಗಿ ವಕಾಲತ್ತನ್ನು ವಹಿಸದೇ ಇರಲು ಮನವಿ ಮಾಡಲು ಕಾಯ೯ಕಾರಿಣಿ ಸಭೆಯಲ್ಲಿ ಸರ್ವಾನುಮತದಿಂದ ನಿಣ೯ಯಿಸಲಾಯಿತು.

ಮೇಲಿನ ನಿಣ೯ಯದಂತೆ ಮಂಗಳೂರು ವಕೀಲರ ಸಂಘದ ಸದಸ್ಯರು ಇಂತಹ ಕೃತ್ಯದಲ್ಲಿ ಭಾಗಿಯಾದ ಯಾವುದೇ ಆರೋಪಿಗಳ ಪರವಾಗಿ ವಕಾಲತ್ತು ವಹಿಸದಂತೆ ವಿನಂತಿ.

ಪ್ರಧಾನ ಕಾರ್ಯದರ್ಶಿ, ಮಂಗಳೂರು ವಕೀಲರ ಸಂಘ.

- Advertisement -

Related news

error: Content is protected !!