Wednesday, June 23, 2021
spot_imgspot_img
spot_imgspot_img

ಸುಳ್ಯ: ಉತ್ತರಖಾಂಡ್‌ನಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಶಿಬಿರಕ್ಕೆ ವಿಸ್ಮಿತ ಕೆಪಿ ಆಯ್ಕೆ

- Advertisement -
- Advertisement -

ಸುಳ್ಯ: ಎನ್‌ಎಂಸಿ ಸುಳ್ಯದ ಪ್ರಥಮ ಬಿಕಾಂ ವಿದ್ಯಾರ್ಥಿನಿ ಕೆಡೆಟ್ ವಿಸ್ಮಿತ ಕೆಪಿ ಯವರು ಉತ್ತರಕಾಶಿ, ಉತ್ತರಖಾಂಡ್ ನಲ್ಲಿ ಎನ್‌ಸಿಸಿ ವತಿಯಿಂದ ನಡೆಯುವ ರಾಷ್ಟ್ರೀಯ ಮಟ್ಟದ ಶಿಬಿರಕ್ಕೆ ೧೯ ಕೆಎಆರ್ ಬೆಟಾಲಿಯನ್ , ಎನ್‌ಸಿಸಿ ಮಡಿಕೇರಿಯಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿನಿಯಾಗಿದ್ದಾರೆ.

೨೦೨೧ ಜೂನ್ ೬ ರಿಂದ ಜೂನ್ ೧೯ ರವರೆಗೆ ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಅಡ್ವೆಂಚರಸ್ ಕೋರ್ಸ್ ಕ್ಯಾಂಪ್ ಇದಾಗಿದೆ. ಇವರಿಗೆ ಎನ್‌ಎಂಸಿ ಕಾಲೇಜಿನ ಎನ್‌ಸಿಸಿ ಘಟಕದ ಎಎನ್‌ಒ ಲೆಫ್ಟಿನೆಂಟ್ ಸೀತರಾಮ ಎಂಡಿ ಯವರು ಮಾರ್ಗದರ್ಶನ ನೀಡಿರುತ್ತಾರೆ.

ಇವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಎಲಿಮಲೆ ಜ್ಞಾನ ದೀಪ ವಿದ್ಯಾಸಂಸ್ಥೆ ಯಲ್ಲಿ ವ್ಯಾಸಾಂಗ ಮಾಡಿದ್ದು ,ಪದವಿ ಪೂರ್ವ ಶಿಕ್ಷಣವನ್ನು ಎನ್‌ಎಂಸಿ ಕಾಲೇಜಿನಲ್ಲಿ ಮಾಡಿರುತ್ತಾರೆ.ಪ್ರಸ್ತುತ ಈಗ ಎನ್‌ಎಂಸಿ ಪದವಿ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದು ಕಲಿಕೆಯೊಂದಿಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕ್ಕೊಂಡು ಜಿಲ್ಲೆ ,ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಿಂಚಿದ್ದಾರೆ.

ಕಬಡ್ಡಿಯಲ್ಲಿ ರಾಜ್ಯ ಮಟ್ಟದ ತಂಡವನ್ನು ಪ್ರತಿನಿಧಿಸಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಕೀರ್ತಿ ಇವರಿಗಿದೆ.ಇವರು ಮರ್ಕಂಜ ಗ್ರಾಮದ ಕೊಂಪುಳಿ ಪುಂಡರೀಕ ಗೌಡ ಹಾಗೂ ಜ್ಯೋತಿ ಪ್ರಭಾ ದಂಪತಿಗಳ ಪುತ್ರಿಯಾಗಿರುತ್ತಾರೆ.

driving
- Advertisement -
- Advertisement -

MOST POPULAR

HOT NEWS

Related news

error: Content is protected !!