Saturday, June 13, 2026
spot_imgspot_img
spot_imgspot_img

ಅಪ್ರಾಪ್ತ ದಲಿತ ಬಾಲಕಿಯ ಮನೆಗೆ ಭೇಟಿ ನೀಡಿ ಸಾಂತ್ವನ-ಭರವಸೆ ನೀಡಿದ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಮುಖಂಡರು

- Advertisement -
- Advertisement -

ಅಪ್ರಾಪ್ತ ದಲಿತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಮುಖಂಡರು ಬಾಲಕಿಯ ಮನೆಗೆ ಭೇಟಿ ನೀಡಿ ಬಾಲಕಿಗೆ ಹಾಗೂ ಮನೆಯವರಿಗೆ ಸಾಂತ್ವನ ಜೊತೆಗೆ ಭರವಸೆ ನೀಡಿದರು.

ಬಾಲಕಿಗೆ ನ್ಯಾಯ ಒದಗಿಸುವುದರ ಜೊತೆಗೆ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲು ಕಾನೂನು ರೀತಿಯಲ್ಲಿ ಹೋರಾಟ ಮಾಡಲು ನಾವು ನಿಮ್ಮೊಂದಿಗೆ ಬೆಂಬಲಿಗರಾಗಿದ್ದೇವೆ ಎಂದು ಸಾಂತ್ವನ ಹೇಳಿದರು.

ಆರ್ಥಿಕವಾಗಿ ತೀವ್ರ ಬಡತನದಿಂದ ಕೂಡಿರುವ ದಲಿತ ಬಾಲಕಿಯ ಕುಟುಂಬಕ್ಕೆ ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ ಎಂಬುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್, ಬಜರಂಗದಳ ಪ್ರಾಂತ ಸಹ ಸಂಯೋಜಕ್ ಮುರಳೀಕೃಷ್ಣ ಹಸಂತ್ತಡ್ಕ, ಬಜರಂಗದಳ ವಿಭಾಗ ಸಹ ಸಂಯೋಜಕ್ ಪುನೀತ್ ಅತ್ತಾವರ, ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ, ಪ್ರಮುಖರಾದ ಯತೀಶ್ ಪೆರುವಾಯಿ, ಪ್ರಮೋದ್ ಪಂಪ್ವೆಲ್, ಆಜಿತ್ ಕೆಯ್ಯೂರು, ಶಿಬಿನ್ ಪಡಿಕ್ಕಲ್ ಉಪಸ್ಥಿತರಿದ್ದರು.

- Advertisement -

Related news

error: Content is protected !!