Sunday, July 26, 2026
spot_imgspot_img
spot_imgspot_img

ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿದ್ದ ಭಕ್ತರ ಮೇಲೆ ಚಿರತೆ ದಾಳಿ-ಬಾಲಕನಿಗೆ ಗಾಯ

- Advertisement -
- Advertisement -

ಚಾಮರಾಜನಗರ: ಜಿಲ್ಲೆಯ ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿದ್ದ ಭಕ್ತರ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಭಕ್ತರಲ್ಲಿ ಆತಂಕ ಮೂಡಿಸಿದೆ.

ಬೆಂಗಳೂರು ದಕ್ಷಿಣ ಚನ್ನಪಟ್ಟಣ ಮೂಲದ ಶ್ರೇಯಸ್ ಎಂಬ ಬಾಲಕ ತನ್ನ ಕುಟುಂಬದೊಂದಿಗೆ ಪಾದಯಾತ್ರೆಗಾಗಿ ಬಂದಿದ್ದ ವೇಳೆ ಈ ಘಟನೆ ಸಂಭವಿಸಿದೆ. ಪಾದಯಾತ್ರಿಗಳು ಗುಂಪುಗುಂಪಾಗಿ ಸಾಗುತ್ತಿದ್ದ ವೇಳೆ ಚಿರತೆ ಬಾಲಕನ ಮೇಲೆ ಎರಗಿದೆ.ದಾಳಿಯ ವೇಳೆ ಬಾಲಕ ಜೋರಾಗಿ ಕಿರುಚಿಕೊಂಡಿದ್ದರಿಂದ ಬೆದರಿದ ಚಿರತೆ ಸ್ಥಳದಿಂದ ಕಾಲ್ಕಿತ್ತಿದೆ. ಈ ಘಟನೆಯಿಂದ ಪಾದಯಾತ್ರಿಗಳಲ್ಲಿ ಮತ್ತೆ ಚಿರತೆ ಭೀತಿ ಉಂಟಾಗಿದೆ.ಘಟನೆ ಬಳಿಕ ಅರಣ್ಯ ಇಲಾಖೆ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ವನ್ಯಜೀವಿಗಳಿಗೆ ತೊಂದರೆಯಾಗದಂತೆ ನಾಲ್ವರು ಸದಸ್ಯರನ್ನೊಳಗೊಂಡ ವಿಶೇಷ ತಂಡವನ್ನು ನಿಯೋಜಿಸಲಾಗಿದೆ. ಜೊತೆಗೆ ಪೊಲೀಸ್, ಅರಣ್ಯ ಹಾಗೂ ಸಂಬಂಧಿತ ಪ್ರಾಧಿಕಾರದ ಸಿಬ್ಬಂದಿಯನ್ನು ಭದ್ರತೆಗೆ ನೇಮಿಸಲಾಗಿದೆ.ದಾಳಿಯಿಂದ ಗಾಯಗೊಂಡ ಬಾಲಕನಿಗೆ ಮಲೆ ಮಹದೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.

- Advertisement -

Related news

error: Content is protected !!