Friday, August 7, 2026
spot_imgspot_img
spot_imgspot_img

ಉಡುಪಿ: ಮನೆಯೊಳಗೆ ಅವಿತು ಕುಳಿತಿದ್ದ ಚಿರತೆ ಮರಿ ರಕ್ಷಣೆ

- Advertisement -
- Advertisement -

ಬ್ರಹ್ಮಾವರ: ಒಂದು ವರ್ಷ ವಯಸ್ಸಿನ ಚಿರತೆ ಮರಿಯೊಂದು ಆಹಾರ ಹುಡುಕಿ ಬಂದು ಮನೆಯೊಳಗೆ ಅವಿತು ಮನೆಯವರಿಗೆ ಕಾಟಕೊಟ್ಟ ಘಟನೆ ಬ್ರಹ್ಮಾವರ ಚಾಂತಾರು ಅಗ್ರಹಾರದ ಕೃಷ್ಣಮೂರ್ತಿ ಕೆದಿಲಾಯ ಎಂಬವರ ಮನೆಯಲ್ಲಿ ನಡೆದಿದೆ.

ಆಹಾರ ಹುಡುಕಿಕೊಂಡು ಬಂದ ಹೆಣ್ಣು ಚಿರತೆ ಮರಿ ಮನೆಯೊಂದರ ಬಳಿಗೆ ಬಂದಿದೆ. ಈ ಸಂದರ್ಭ ಬಲೆ ಹಾಕಿ ಚಿರತೆಯನ್ನು ಬಂಧಿಸಿದ್ದು, ಬಳಿಕ ಬ್ರಹ್ಮಾವರ ಪೊಲೀಸ್ ಮತ್ತು ಅರಣ್ಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ತಕ್ಷಣ ಮನೆಗೆ ಬಂದ ಅರಣ್ಯ ಇಲಾಖೆ ಸಿಬ್ಬಂದಿಗಳು ಬೋನು ಇರಿಸಿ ಚಿರತೆಯನ್ನು ಹಿಡಿದಿದ್ದಾರೆ. ಚಿರತೆಯ ಆರೋಗ್ಯ ತಪಾಸಣೆ ಮಾಡಿ, ವೈದ್ಯಾಧಿಕಾರಿ ಆರೋಗ್ಯ ದೃಢಿಕರಿಸಿದ ಬಳಿಕ ಸಿದ್ಧಾಪುರ ಬಳಿಯ ಹೊಸಂಗಡಿ ಕಾಡಿನಲ್ಲಿ ಚಿರತೆ ಮರಿಯನ್ನು ಸ್ವತಂತ್ರಗೊಳಿಸಿಲಾಗಿದೆ.

- Advertisement -

Related news

error: Content is protected !!