Tuesday, June 16, 2026
spot_imgspot_img
spot_imgspot_img

ಮದ್ದೂರು ಗಲಭೆ ಎನ್‌ಐಎ ತನಿಖೆಗೆ ಆಗ್ರಹಿಸಿ ಅಮಿತ್ ಶಾಗೆ ಪತ್ರ

- Advertisement -
- Advertisement -

ಬೆಂಗಳೂರು: ಮಂಡ್ಯದ ಮದ್ದೂರು ಗಣೇಶ ಮೆರವಣಿಗೆ ಮೇಲೆ ಮಸೀದಿಯಿಂದ ಕಲ್ಲು ತೂರಿದ ಘಟನೆಯ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ ಮೂಲಕ ತನಿಖೆ ನಡೆಸಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಈ ಗಲಭೆ ಹಾಗೂ ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಇದೇ ಮಾದರಿಯ ಗಲಭೆಗಳ ಹಿಂದೆ ಮತಾಂಧ ಶಕ್ತಿಗಳ ವ್ಯವಸ್ಥಿತ ಪಿತೂರಿ ಇರುವ ಅನುಮಾನವಿದೆ. ಹೀಗಾಗಿ ಎನ್‌ಐಎ ಮೂಲಕ ತನಿಖೆ ನಡೆಸಬೇಕೆಂದು ಹಿಂದೂ ಮುಖಂಡ ತೇಜಸ್ ಗೌಡ ಎಂಬವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ರಾಜ್ಯದ ಹಳೇ ಮೈಸೂರು ಭಾಗದಲ್ಲಿ ಕಳೆದೊಂದು ವರ್ಷದಿಂದ ನಡೆಯುತ್ತಿರುವ ಅನ್ಯಧರ್ಮೀಯರ ಗಲಭೆಗಳಿಂದ ಹಿಂದೂಗಳು ಭಯದಲ್ಲಿ ಬದುಕುವಂತಾಗಿದೆ. ಕಳೆದ ವರ್ಷ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ಪೆಟ್ರೋಲ್ ಬಾಂಬ್ ಹಾಕಲಾಗಿತ್ತು. ನಂತರ ಮೈಸೂರಿನ ಉದಯಗಿರಿಯಲ್ಲೂ ಕ್ಷುಲ್ಲಕ ಕಾರಣಕ್ಕೆ ಪೊಲೀಸರ ಮೇಲೆಯೇ ದಾಳಿ ಮಾಡಲಾಗಿತ್ತು. ಈ ವರ್ಷ ಮತ್ತೆ ಮಂಡ್ಯ ಜಿಲ್ಲೆಯ ಮದ್ದೂರು ನಗರದಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಮಾಡಿ ಹಿಂದೂಗಳನ್ನು ಭಯಭೀತರನ್ನಾಗಿ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ದೇಶದಲ್ಲಿ ಈ ರೀತಿಯ ಭೀತಿಯಲ್ಲಿ ಬದುಕುವುದು ಎಷ್ಟರ ಮಟ್ಟಿಗೆ ಸರಿ? ಈ ರೀತಿಯ ಘಟನೆಗಳ ಹಿಂದೆ ನಿಷೇಧಿತ ಇಸ್ಲಾಂ ಸಂಘಟನೆಗಳ ಕೈವಾಡವಿರುವ ಅನುಮಾನ ಇದೆ. ಈ ಕೂಡಲೇ ಕೇಂದ್ರ ಗೃಹ ಇಲಾಖೆ ಮಧ್ಯಪ್ರವೇಶ ಮಾಡಿ ಎನ್‌ಐಎ ತನಿಖೆ ಮಾಡಿಸಬೇಕೆಂದು ಪತ್ರ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮನವಿ ಮಾಡಿದ್ದಾರೆ.

ಕಲ್ಲು ತೂರಲು ಮತಾಂಧ ಮನಸ್ಥಿತಿಯೇ ಕಾರಣ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಗಲಭೆ ಕಿಂಗ್‌ಪಿನ್ ಚನ್ನಪಟ್ಟಣ ಮೂಲದ ಇರ್ಫಾನ್ ಆಗಿದ್ದು ಹಲವು ವರ್ಷಗಳಿಂದ ಮದ್ದೂರಿನಲ್ಲಿ ವಾಸವಾಗಿದ್ದಾನೆ. ಮಸೀದಿ ಮುಂದೆ ಗಣೇಶಮೂರ್ತಿ ಮೆರವಣಿಗೆ ಹೋಗುವುದನ್ನು ಸಹಿಸಲಾಗದೆ ಇರ್ಫಾನ್ ತನ್ನ ಸ್ನೇಹಿತ ಜಾಫರ್‌ಗೆ ಕಲ್ಲು ತೂರುವಂತೆ ಪ್ರಚೋದಿಸಿದ್ದ ಎನ್ನಲಾಗಿದೆ.

ಗಲಾಟೆ ಜೋರಾಗುತ್ತಿದ್ದಂತೆ ಇರ್ಫಾನ್ ಮತ್ತು ಗ್ಯಾಂಗ್ ಸದಸ್ಯರು ಪರಾರಿಯಾಗಿದ್ದರು. ಇರ್ಫಾನ್ ಮತ್ತು 22 ಜನರನ್ನು ಪೊಲೀಸರು ಬಂಧಿಸಿಸಿದ್ದಾರೆ. ಕೃತ್ಯಕ್ಕೆ ಪ್ರಚೋದನೆ ನೀಡಿದ್ದ ಜಾಫರ್ ಪರಾರಿಯಾಗಿದ್ದಾನೆ.

- Advertisement -

Related news

error: Content is protected !!