Friday, June 5, 2026
spot_imgspot_img
spot_imgspot_img

ಮಂಗಳೂರು: ತವರಿಗೆ ಆಗಮಿಸಿದ ಪೂಜಾ ಹೆಗ್ಡೆ; ಹೆಬ್ಬಲಸು ತಿಂದ ಖುಷಿಯನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡ ನಟಿ

- Advertisement -
- Advertisement -

ಮಂಗಳೂರು: ಸೌತ್ ಬ್ಯೂಟಿ ಪೂಜಾ ಹೆಗ್ಡೆ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಸಿನಿಮಾ ರಿಲೀಸ್‌ ಆದ ಬೆನ್ನಲ್ಲೇ ತಮ್ಮ ಕೆಲಸಕ್ಕೆಲ್ಲಾ ಬ್ರೇಕ್ ಹಾಕಿ, ಮಂಗಳೂರಿಗೆ ನಟಿ ಪೂಜಾ ಹೆಗ್ಡೆ ಬಂದು ಇಳಿದಿದ್ದಾರೆ. ಕಾಡಿನಲ್ಲಿ ಸುತ್ತಾಡಿ, ಹೆಬ್ಬಲಸು ಕಿತ್ತು ತಿಂದ ಖುಷಿಯನ್ನು ತನ್ನ ಇನ್ಸ್ಟಾ ಗ್ರಾಂ ನಲ್ಲಿ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ.

ಕುಟುಂಬದ ಜೊತೆ ಪೂಜಾ ಹೆಗ್ಡೆ ಬಾಂಬೆಯಲ್ಲಿ ಸೆಟೆಲ್ ಆಗಿದ್ದಾರೆ. ಆಗಾಗ ನಟಿ ಮಂಗಳೂರಿಗೆ ಬಂದು ಹೋಗುತ್ತಾರೆ. ಪೂಜಾ ಕುಟುಂಬ ಮೂಲತಃ ಮಂಗಳೂರಿನವರಾಗಿದ್ದು, ದೈವ ಕೋಲ, ಕಟೀಲು ದೇವಸ್ಥಾನ ಅಂತಾ ಬಂದು ಹೋಗುತ್ತಾರೆ.

ಇದೀಗ ಸಿನಿಮಾ ತೆರೆಕಂಡ ಬೆನ್ನಲ್ಲೇ ತಮ್ಮ ಕುಟುಂಬದ ಜೊತೆ ಮಂಗಳೂರಿಗೆ ಪೂಜಾ ಬಂದಿದ್ದಾರೆ. ಕಾಡಿನಲ್ಲಿ ಸುತ್ತಾಡಿ, ಹೆಬ್ಬಲಸು ಕಿತ್ತು ತಿಂದಿದ್ದಾರೆ. ನಾಯಿ ಜೊತೆ ಆಟವಾಡಿದ್ದಾರೆ. ಮಂಗಳೂರಿನ ರುಚಿಯಾದ ಮೀನಿನ ಊಟ ಸವಿದಿದ್ದಾರೆ. ಈ ಕುರಿತ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

- Advertisement -

Related news

error: Content is protected !!