ವಿಟ್ಲದಲ್ಲಿ ನಡೆದ ಕಾರ್ಯಕ್ರಮ
ಲಯನ್ಸ್ ಜಿಲ್ಲೆಯ ಪ್ರಾಂತೀಯ ಅಧ್ಯಕ್ಷ ಸಂತೋಷ್ ಶೆಟ್ಟಿ ಅವರಿಂದ ಚಾಲನೆ
ವಿಟ್ಲ: ಲಯನ್ಸ್ ಜಿಲ್ಲೆ 317ಡಿ ಇದರ ಪ್ರಾಂತ್ಯ 1ರ ಪಿಎಸ್ ಟಿ ತರಬೇತಿ ಕಾರ್ಯಕ್ರಮ ಮಂಗಳವಾರ ವಿಟ್ಲದ ಜೆ. ಎಲ್ ಆಡಿಟೋರಿಯಂ ನಲ್ಲಿ ನಡೆಯಿತು.
ಪ್ರಾಂತ್ಯ ಅಧ್ಯಕ್ಷ ಲಯನ್. ಸಂತೋಷ್ ಶೆಟ್ಟಿ ಪೆಲ್ತಡ್ಕ ಎಂಜೆಎಫ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭ ಜಿಲ್ಲಾ ಗವರ್ನರ್ ಲಯನ್. ಡಾ. ಗೀತಾಪ್ರಕಾಶ್ ಪಿಎಂಜೆಎಫ್ ಹಾಗೂ ಜಿಲ್ಲಾ ಪ್ರಥಮ ಮಹಿಳೆ ಲಯನ್. ಡಾ. ಗಾಯತ್ರಿ ಜಿ ಪ್ರಕಾಶ್, ಪ್ರಥಮ ಉಪಗವರ್ನರ್ ಲಯನ್ ವಸಂತ್ ಕುಮಾರ್ ಶೆಟ್ಟಿ ಪಿ. ಎಮ್ ಜೆ ಎಫ್ , ಜಿಲ್ಲಾ ಕ್ಯಾಬಿನೆಟ್ ಕೋಶಾಧಿಕಾರಿ ಲಯನ್ ಮೊಹಮದ್ ಇಕ್ಬಾಲ್, ಜಿಲ್ಲಾ ಸಂಪರ್ಕಾಧಿಕಾರಿ ಲಯನ್. ಮಂಗೇಶ್ ಭಟ್ ವಿಟ್ಲ, ಜೆಎಂಟಿ ಕೋ ಆರ್ಡಿನೆಟರ್ ಲಯನ್ ಮೋಹನ್ ದಾಸ್ ಶೆಟ್ಟಿ, ಜಿಎಸ್ ಟಿ ಕೋ ಆರ್ಡಿನೇಟರ್ ಪ್ರವೀಣ್ ಶೆಟ್ಟಿ, ಮಾಜಿ ಗವರ್ನರ್ ಎಂ.ಬಿ ಸದಾಶಿವ, ಡಿಜೆ ಕೋ ಆರ್ಡಿನೇಟರ್ ಬಿ. ಎಮ್ ಭಾರತೀ ಉಪಸ್ಥಿತರಿದ್ದರು.
ಪ್ರಾಂತ್ಯ 1ರ ಹತ್ತು ಕ್ಲಬ್ ಗಳಾದ ವಿಟ್ಲ, ಪುತ್ತೂರು, ಸುಳ್ಯ, ಪಂಜ, ಪುತ್ತೂರು ಕಾವು, ಕಡಬ, ಜಾಳ್ಸೂರ್, ಬೆಳ್ತಂಗಡಿ, ಗುತ್ತಿಗಾರ್, ಸಂಪಾಜೆಯ ಎಲ್ಲಾ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಕೋಶಾಧಿಕಾರಿಗಳು ಭಾಗವಹಿಸಿದ್ದರು.