


ವಿಟ್ಲ : ವಿಟ್ಲ ಲಯನ್ಸ್ ಕ್ಲಬ್ ವತಿಯಿಂದ ಹಾಗೂ ಶಾರದಾ ಯೋಗ ಮತ್ತು ನೇಚುರೋಪತಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ತಲಪಾಡಿ ಇದರ ಜಂಟಿ ಆಶ್ರಯದಲ್ಲಿ ಹಾಗೂ ವೀರಾಂಜನೇಯ ದೇವಸ್ಥಾನ ಟ್ರಸ್ಟ್(ರಿ),ಮಾರುತಿ ಫ್ರೆಂಡ್ಸ್ ಕ್ಲಬ್ (ರಿ) ಕೊಡಪದವು, ಧರ್ಮಸ್ಥಳ ಗ್ರಾಮಭಿವೃದ್ದಿ ಒಕ್ಕೂಟ ಬಿ ಇವರ ಸಹಕಾರದೊಂದಿಗೆ ಉಚಿತ ಾರೋಗ್ಯ ತಪಾಸಣಾ ಮತ್ತು ಮಾಹಿತಿ ಶಿಬಿರವನ್ನು ಶ್ರೀ ವೀರಾಂಜನೇಯ ದೇವಸ್ಥಾನ ಸಭಾಭವನ ಕೋಡಪದವು ಇಲ್ಲಿ ನಡೆಸಲಾಯಿತು .
ಕಾರ್ಯಕ್ರಮವನ್ನು ವಿಟ್ಲ ಲಯನ್ಸ್ ಕ್ಲಬ್ ಇದರ ಅಧ್ಯಕ್ಷರಾದ ಲಯನ್ ರಜಿತ್ ಆಳ್ವ ಎರ್ಮೆನಿಲೆ ಇವರ ಅಧ್ಯಕ್ಷತೆಯಲ್ಲಿ ಸಂಸ್ಥೆಯ ಸ್ಥಾಪಕ ಸದಸ್ಯರಾದ ಲಯನ್ ಸಿ. ವಿ.ಗೋಪಾಲಕೃಷ್ಣ ಭಟ್ ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಜಿಲ್ಲಾ ರಾಜ್ಯಪಾಲರಾದ ಲಯನ್ ಡಾ. ಗೀತಾ ಪ್ರಕಾಶ್, ಲಯನ್ಸ್ ವಲಯಧಿಕಾರಿ ಲಯನ್ ಸುದೇಶ್ ಭಂಡಾರಿ ಎರ್ಮೆನಿಲೆ, ಲಯನ್ ಗಂಗಾಧರ್, ಲಯನ್ ಅಂಥೋನಿ ಲೋಬೊ ಲಿಯೋ ಡಾ. ಅನ್ವೇಶ್ ಹಾಗೂ ವೀರಾಂಜನೇಯ ಟ್ರಸ್ಟ್ ನ ಕಿಶನ್ ಭಟ್ ನೀಟೆಲೆ, ಮಾರುತಿ ಫ್ರೆಂಡ್ಸ್ ಇದರ ಅಧ್ಯಕ್ಷರಾದ ಯಶವಂತ, ಶಾರದಾ ನ್ಯಾಚುರೊಪಾತಿ ಕಾಲೇಜು ಇಲ್ಲಿಯ ಡಾ. ಸುಪ್ರಿಯಾ. ವಿಟ್ಲ ಲಯನ್ಸ್ ಕ್ಲಬ್ ಇದರ ಕಾರ್ಯದರ್ಶಿ ಅರವಿಂದ ರೈ ಕಾರ್ಯಕ್ರಮ ನಿರೂಪಿಸಿದರು ಹಾಗೂ ಕೋಶಾಧಿಕಾರಿ ಮನೋಜ್ ರೈ ಇವರು ಸಹಕರಿಸಿದರು.
ಈ ಆರೋಗ್ಯ ಶಿಬಿರದಲ್ಲಿ 130 ಕಿಂತಲೂ ಹೆಚ್ಚು ಜನರು ಸದುಪಯೋಗ ಪಡೆದುಕೊಂಡರು. ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿಗಾರ್ ಮತ್ತು ಕರಾಟೆ ಪಟು ಮಾಸ್ಟರ್ ಸಂಜಯ ಶರ್ಮ ಇವರನ್ನು ಮಾರುತಿ ಫ್ರೆಂಡ್ಸ್ ಕ್ಲಬ್ ಕೊಡಪದವು ಇವರ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಭಾಧ್ಯಕ್ಷರಾಗಿ ಗೋಪಾಲಕೃಷ್ಣ ಭಟ್ ಅತಿಥಿಗಳಾಗಿ ಸಾಮಾಜಿಕ ಕಾರ್ಯಕರ್ತ ಮಾಜಿ ರಾಮ ಭಟ್ ಪ್ರಸ್ತಾಪಿಕವಾಗಿ ಆಹಾರ ಪದ್ಧತಿಯ ಬಗ್ಗೆ ಮಾತನಾಡಿದರು. ಇನ್ನೊರ್ವ ಅತಿಥಿ ಬಲಿಪಗುಲಿ ರಾಜಾರಾಮ್ ಭಟ್ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಮಾರುತಿ ಫ್ರೆಂಡ್ಸ್ ನಂತಹ ಸಂಘಗಳು ಇರುವುದರಿಂದ ಸಂಸ್ಕೃತಿ ಉಳಿಯುವಂತಾಗುತ್ತದೆ ಜೊತೆಗೆ ದೈಹಿಕ ಅರೋಗ್ಯ ವೃದ್ದಿಸುತ್ತದೆ ಎಂದರು. ಡಾ.ಗೀತಾ ಪ್ರಕಾಶ್ ಇವರು ಬದಲಾದ ಜೀವನ ಕ್ರಮವನ್ನು ವಿವರಿಸಿ ಗ್ರಾಮೀಣ ಮಟ್ಟದಲ್ಲಿ ಮದುಮೇಹದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತನ್ನ ಜಿಲ್ಲಾ ರಾಜ್ಯಪಾಲ ಅಧಿಕಾರದ ಅವಧಿಯಲ್ಲಿ 25 ಲಕ್ಷ ವೆಚ್ಚದಲ್ಲಿ ಶಾರದಾ ನ್ಯಾಚುರೋಪತಿ ಕಾಲೇಜಗೆ ಬೇಕಾದ ಪರಿಕರಗಳನ್ನು ನೀಡಲಾಗಿದೆ ಹಾಗೂ ಜಂಟಿಯಾಗಿ ಎರಡೂ ಸಂಸ್ಥೆಗಳು ಕಾರ್ಯಕ್ರಮಗಳನ್ನು ನೀಡುತ್ತಿದ್ದು ಜನರು ಇದರ ಸದುಪಯೋಗ ಪಡೆದುಕೊಳ್ಳಲು ವಿನಂತಿಸಿದರು.ಡಾ. ಸುಪ್ರಿಯಾ ಹಾಗೂ ಡಾ. ಚೈತ್ರ ಇವರ ತಂಡ ಉಚಿತ ಸಲಹೆಗಳನ್ನು ನೀಡಿ ಆಹಾರ ಪದ್ದತಿಯ ಮೂಲಕ ಹೇಗೆ ಕಾಯಿಲೆಗಳನ್ನು ಹತೋಟಿಗೆ ತರಬಹುದು ಎಂಬ ಬಗ್ಗೆ ಮಾಹಿತಿ ನೀಡಿದರು








