Saturday, June 6, 2026
spot_imgspot_img
spot_imgspot_img

ಲಯನ್ಸ್ ನಿಕಟಪೂರ್ವ ಪ್ರಾಂತೀಯ ಅಧ್ಯಕ್ಷ ಸುದರ್ಶನ್ ಪಡಿಯಾರ್‌ರವರಿಗೆ ‘ಲಯನ್ಸ್ ಸೇವಾ ರತ್ನ ಪ್ರಶಸ್ತಿ’

- Advertisement -
- Advertisement -

ಲಯನ್ಸ್ ಜಿಲ್ಲೆ 317ಡಿ ಲಯನ್ಸ್ ಕ್ಲಬ್ ಪಾಣಾಜೆ ಇದರ ವತಿಯಿಂದ ಲಯನ್ಸ್ ನಿಕಟಪೂರ್ವ ಪ್ರಾಂತೀಯ ಅಧ್ಯಕ್ಷರಾದ ಸುದರ್ಶನ್ ಪಡಿಯಾರ್‌ರವರಿಗೆ ಲಯನ್ಸ್ ಸೇವಾ ರತ್ನ ಪ್ರಶಸ್ತಿಯನ್ನು ಜಿಲ್ಲೆಯ ಎರಡನೇ ಉಪರಾಜ್ಯಪಾಲರಾದ ಕುಡುಪಿ ಅರವಿಂದ ಶೆಣೈಯವರ ಸಮಕ್ಷಮದಲ್ಲಿ ನೀಡಲಾಯಿತು.

ಈ ಸಂದರ್ಭದಲ್ಲಿ ಪಾಣಾಜೆ ಕ್ಲಬ್‌ನ ಅಧ್ಯಕ್ಷ ಮಹಮ್ಮದ್ ಕುಕ್ಕುವಳ್ಳಿ, ಕಾರ್ಯದರ್ಶಿ ದಯಾನಂದ ರೈ, ಕೋಶಾಧಿಕಾರಿ ಪ್ರಕಾಶ್ ರೈ, ಪ್ರಾಂತೀಯ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್, ವಲಯಾಧ್ಯಕ್ಷ ಪವನ್‌ರಾವ್, ಹಾಗೂ ಲಯನ್ಸ್ ಸದಸ್ಯರು ಉಪಸ್ಥಿತರಿದ್ದರು.

‘ಲಯನ್ಸ್ ಸೇವಾ ರತ್ನ ಪ್ರಶಸ್ತಿ’ ಪುರಸ್ಕೃತ ಲಯನ್ಸ್ ನಿಕಟಪೂರ್ವ ಪ್ರಾಂತೀಯ ಅಧ್ಯಕ್ಷ ಸುದರ್ಶನ್ ಪಡಿಯಾರ್‌ರವರಿಗೆ ಲಯನ್ಸ್ ಕ್ಲಬ್ ವಿಟ್ಲ ಸಿಟಿ ಅಧ್ಯಕ್ಷ ಜಯರಾಮ್ ಬಲ್ಲಾಳ್ ಹಾಗೂ ಲಯನ್ಸ್ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.

- Advertisement -

Related news

error: Content is protected !!