Monday, May 6, 2024
spot_imgspot_img
spot_imgspot_img

ವಿಟ್ಲ: ಶಿವಂ ಡ್ಯಾನ್ಸ್ ಅಕಾಡೆಮಿ ಹಾಗೂ ಯುವಕ ಮಂಡಲ (ರಿ) ವಿಟ್ಲ ಸಹಭಾಗಿತ್ವದಲ್ಲಿ ನಡೆದ ದ್ವಿತೀಯ ವರ್ಷದ ಶ್ರೀ ಕೃಷ್ಣ ವೇಷ ಸ್ಪರ್ಧೆಯ ಫಲಿತಾಂಶ ಪ್ರಕಟ

- Advertisement -G L Acharya panikkar
- Advertisement -

ವಿಟ್ಲ: ಶಿವಂ ಡ್ಯಾನ್ಸ್ ಅಕಾಡೆಮಿ ಹಾಗೂ ಯುವಕ ಮಂಡಲ (ರಿ) ವಿಟ್ಲ ಸಹಭಾಗಿತ್ವದಲ್ಲಿ ದ್ವಿತೀಯ ವರ್ಷದ ಶ್ರೀ ಕೃಷ್ಣ ವೇಷ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಸುಮಾರು 850ಕ್ಕೂ ಅಧಿಕ ಪುಟಾಣಿಗಳು ಶ್ರೀ ಕೃಷ್ಣ ವೇಷದ ಭಾವಚಿತ್ರವನ್ನು ಕಳುಹಿಸಿ ಕೊಡುವ ಮೂಲಕ ಭಾಗವಹಿಸಿದ್ದು, ಸ್ಪರ್ಧೆಯ ವಿಜೇತರನ್ನು ಗಣ್ಯ ಅನುಭವಿ ತೀರ್ಪುಗಾರರ ಉಪಸ್ಥಿತಿಯಲ್ಲಿ ಸೆ.೩ ರಂದು ಆಯ್ಕೆ ಮಾಡಲಾಯಿತು.

ಸ್ಪರ್ಧೆಯ ಫಲಿತಾಂಶ ಈ ಕೆಳಗಿನಂತಿದೆ. ಜೂನಿಯರ್ ವಿಭಾಗದಲ್ಲಿ ಪ್ರಥಮ- ರುತ್ವಿ ಜೆ ಅಮೀನ್ ಪದಡ್ಕ ಮನೆ ಪುತ್ತೂರು, ದ್ವಿತೀಯ- ಹನ್ಸ್ ಕಿರಣ್ ಶೆಟ್ಟಿ ಕಡೇಶಿವಾಲಯ, ತೃತೀಯ- ವಾಗ್ಮಿ ಕೆ ಕೆಮ್ಮಯಿ. ಸಮಾಧಾನಕರ ಬಹುಮಾನ- ಜಿಯನ್ಸ್ ಸೋಮೇಶ್ವರ, ಶಾರ್ವಿ. ಡಿ ಪೂಜಾರಿ ಇಡ್ಕಿದು, ಶಾರ್ವಿ ಟಿ ಬಾಯರು ಕಾಸರಗೋಡು.

ಸೀನಿಯರ್ ವಿಭಾಗದಲ್ಲಿ ಪ್ರಥಮ- ದಕ್ಷ್ ವೈ ಪೂಜಾರಿ ತುಂಬೆ, ದ್ವಿತೀಯ- ಮೌಲೀಶ ಪ್ರಭು ಕುಕ್ಕಂದೂರು ಕಾರ್ಕಳ, ತೃತೀಯ- ವೃಷಾಂಕ್ ಭಟ್ ಮನ್ನಿಪ್ಪಾಡಿ ಕಾಸರಗೋಡು. ಸಮಾಧಾನಕರ ಬಹುಮಾನ-ಪ್ರಾಯುಷಿ ಎಸ್. ಜೋಗಿ ಕಾಶಿಮಠ ವಿಟ್ಲ, ಅಥರ್ವ ಟಿ ಪುತ್ತೂರು, ಸಾನ್ವಿ ಎಂ ಅಂಚನ್ ಬಪ್ಪನಾಡು

ಈ ಸ್ಪರ್ಧೆಯ ತೀರ್ಪುಗಾರರಾಗಿ ಶಂಕರ್ ಸ್ಟುಡಿಯೋ ನೆಹರು ನಗರ ಪುತ್ತೂರು ಇದರ ಮಾಲೀಕರು ಹಾಗೂ ಇಡ್ಕಿದು ಗ್ರಾ. ಪಂ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಖ್ಯಾತ ನಿರೂಪಕ ವಿ.ಜೆ ಮಧುರಾಜ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಆರ್ ಕೆ ಕ್ರಿಯೆಶನ್ಸ್ ಇದರ ನಿರ್ದೇಶಕ ರಾಜೇಶ್ ವಿಟ್ಲ, ತತ್ವ ಸ್ಕೂಲ್ ಆಫ್ ಆರ್ಟ್ಸ್ ಪುತ್ತೂರು ಇದರ ನಿರ್ದೇಶಕ ಟೀಲಾಕ್ಷ ವಿಟ್ಲ ಸಹಕರಿಸಿದರು.

ಈ ವೇಳೆ ಶಿವಂ ಡ್ಯಾನ್ಸ್ ಅಕಾಡೆಮಿಯ ನಿರ್ದೇಶಕ ಸುಧೀರ್ ನಾಯ್ಕ್, ಯುವಕ ಮಂಡಲ ವಿಟ್ಲ ಇದರ ಅಧ್ಯಕ್ಷ ವಸಂತ್ ಶೆಟ್ಟಿ, ಶಿವಂ ಡ್ಯಾನ್ಸ್ ಅಕಾಡೆಮಿಯ ಮಹೇಶ್ ಕುಮಾರ್ ಶೆಟ್ಟಿ ನೆಟ್ಲ, ಶ್ವೇತಾ ಉಪಸ್ಥಿತರಿದ್ದರು.

- Advertisement -

Related news

error: Content is protected !!