Monday, August 17, 2026
spot_imgspot_img
spot_imgspot_img

ಬಿಜೆಪಿ ನೂತನ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿ ಪ್ರಕಟ: ಕರ್ನಾಟಕದ ಪ್ರೊ. ಎಂ. ನಾಗರಾಜ ಉಪಾಧ್ಯಕ್ಷರಾಗಿ ನೇಮಕ

- Advertisement -
- Advertisement -

ದೆಹಲಿ: ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ನಿತಿನ್ ನಬಿನ್ ಅವರು ರಾಷ್ಟ್ರೀಯ ಪದಾಧಿಕಾರಿಗಳ ಹೊಸ ಪಟ್ಟಿಯನ್ನು ಸೋಮವಾರ(ಆ.17) ಬಿಡುಗಡೆ ಮಾಡಲಾಗಿದೆ. ಪ್ರಮುಖ ಜವಾಬ್ದಾರಿಗಳ ಪಟ್ಟಿಯನ್ನು ಪಕ್ಷದ ಕೇಂದ್ರ ಕಚೇರಿಯಿಂದ ಅಧಿಕೃತವಾಗಿ ಪ್ರಕಟಿಸಲಾಗಿದೆ.

ಈ ನೂತನ ಪಟ್ಟಿಯಲ್ಲಿ ಒಟ್ಟು 13 ರಾಷ್ಟ್ರೀಯ ಉಪಾಧ್ಯಕ್ಷರು, 8 ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು, 16 ರಾಷ್ಟ್ರೀಯ ಕಾರ್ಯದರ್ಶಿಗಳು, ಸಂಘಟನಾ ಪ್ರಧಾನ ಕಾರ್ಯದರ್ಶಿ ಹಾಗೂ ಖಜಾಂಚಿ ಸೇರಿ 65 ಹುದ್ದೆಗಳಿಗೆ ನೇಮಕ ಮಾಡಲಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ನಿರ್ದೇಶನದ ಮೇರೆಗೆ ಈ ನೇಮಕಾತಿಗಳನ್ನು ಮಾಡಲಾಗಿದ್ದು, ಇವು ತಕ್ಷಣದಿಂದಲೇ ಜಾರಿಗೆ ಬರಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕರ್ನಾಟಕದ ಪ್ರೊ. ಎಂ. ನಾಗರಾಜ್ ಅವರಿಗೆ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನ ನೀಡಲಾಗಿದ್ದು, ಬಿ.ಎಲ್. ಸಂತೋಷ್ ಅವರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಜವಾಬ್ದಾರಿಯನ್ನು ಮುಂದುವರಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರು:
1. ವಸುಂಧರಾ ರಾಜೇ ಸಿಂಧಿಯಾ – ರಾಜಸ್ಥಾನ
2. ತೀರಥ್ ಸಿಂಗ್ ರಾವತ್ – ಉತ್ತರಾಖಂಡ
3. ರಾಮ್ ಮಾಧವ್ – ದೆಹಲಿ
4. ಬೈಜಯಂತ್ ಜಯ್ ಪಾಂಡಾ – ಒಡಿಶಾ
5. ಡಿ. ಪುರಂದೇಶ್ವರಿ – ಆಂಧ್ರಪ್ರದೇಶ
6. ರೇಖಾ ವರ್ಮಾ – ಉತ್ತರ ಪ್ರದೇಶ
7. ವರ್ಷಾಬೆನ್ ನರೇಂದ್ರಭಾಯಿ ದೋಷಿ – ಗುಜರಾತ್
8. ಭಾರತಿ ಪ್ರವೀಣ್ ಪವಾರ್ – ಮಹಾರಾಷ್ಟ್ರ
9. ಸರ್ದಾರ್ ಮನ್‌ಪ್ರೀತ್ ಸಿಂಗ್ ಬಾದಲ್ – ಪಂಜಾಬ್
10. ಲಾಲ್ ಸಿಂಗ್ ಆರ್ಯ – ಮಧ್ಯಪ್ರದೇಶ
11. ಎಂ. ನಾಗರಾಜ್ – ಕರ್ನಾಟಕ
12. ತಾರೀಖ್ ಮನ್ಸೂರ್ – ಉತ್ತರ ಪ್ರದೇಶ
13.ಡಾ. ಮಧುಚಂದ್ರ ಕರ್ – ಪಶ್ಚಿಮ ಬಂಗಾಳ

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ - ಸಂಘಟನೆ : ಬಿ.ಎಲ್. ಸಂತೋಷ್‌ – ಕರ್ನಾಟಕ

ರಾಷ್ಟ್ರೀಯ ಸಹ ಪ್ರಧಾನ ಕಾರ್ಯದರ್ಶಿ - ಸಂಘಟನೆ

  • ಶಿವಪ್ರಕಾಶ್ – ರಾಜಸ್ಥಾನ
  • ಸೌದಾನ್ ಸಿಂಗ್‌ – ಚಂಡೀಗಢ
    ರಾಷ್ಟ್ರೀಯ ಖಜಾಂಚಿ- ಸಹ ಖಜಾಂಚಿ
  • ಪಿಯೂಷ್‌ ಗೋಯಲ್ – ಮಹಾರಾಷ್ಟ್ರ
  • ರಾಜೇಶ್ ಮಂಗಲ್ – ರಾಜಸ್ಥಾನ್

ರಾಷ್ಟ್ರೀಯ ಕಾರ್ಯದರ್ಶಿಗಳು:
1.ಕವಿತಾ ಪಾಟೀದಾರ್ – ಮಧ್ಯಪ್ರದೇಶ
2. ಕೆ. ಸುರೇಂದ್ರನ್ – ಕೇರಳ
3. ಡಾ. ಭೋಲಾ ಸಿಂಗ್ – ಉತ್ತರ ಪ್ರದೇಶ
4. ಡಾ. ಪ್ರದೀಪ್ ವರ್ಮಾ – ಜಾರ್ಖಂಡ್
5. ಜಗದೀಶ್ ಈಶ್ವರಭಾಯಿ ಪಟೇಲ್ – ಗುಜರಾತ್
6. ಡಾ. ಸಂದೀಪ್ ಪಾಠಕ್ – ದೆಹಲಿ
7. ಫಾಂಗ್ನಾನ್ ಕೊನ್ಯಾಕ್ – ನಾಗಾಲ್ಯಾಂಡ್
8. ಸಂಗೀತಾ ಯಾದವ್ – ಉತ್ತರ ಪ್ರದೇಶ
9. ಅನಿಲ್ ಆ್ಯಂಟನಿ – ಕೇರಳ
10. ಡಾ. ಎಂ. ವೆಂಕಟೇಶನ್ – ತಮಿಳುನಾಡು
11. ಮನೋಜ್ ತಿಗ್ಗಾ – ಪಶ್ಚಿಮ ಬಂಗಾಳ
12. ಸಿದ್ಧಾರ್ಥ್ ಶಂಭು – ಬಿಹಾರ
13. ಡಾ. ಸ್ವದೇಶ್ ಸಿಂಗ್ – ದೆಹಲಿ
14. ಮೃಗಾಂಕಾ ದೇವ್ ಬರ್ಮನ್ – ಅಸ್ಸಾಂ
15. ರೋಹನ್ ಗುಪ್ತಾ – ಗುಜರಾತ್
16. ಜೈ ಪ್ರಕಾಶ್ – ದೆಹಲಿ

ವಿವಿಧ ಮೋರ್ಚಾಗಳ ಅಧ್ಯಕ್ಷರು:
ಯುವ ಮೋರ್ಚಾ – ಡಾ. ಹೇಮಾಂಗ್ ಜೋಶಿ – ಗುಜರಾತ್
ಮಹಿಳಾ ಮೋರ್ಚಾ – ರೂಪ್ ಕುಮಾರಿ ಚೌಧರಿ – ಛತ್ತೀಸ್‌ಗಢ
ಒಬಿಸಿ ಮೋರ್ಚಾ – ಅಮರಪಾಲ್ ಮೌರ್ಯ – ಉತ್ತರ ಪ್ರದೇಶ
ಕಿಸಾನ್ ಮೋರ್ಚಾ – ಬನ್ಸೀಲಾಲ್ ಗುರ್ಜರ್ – ಮಧ್ಯಪ್ರದೇಶ
ಎಸ್ಸಿ ಮೋರ್ಚಾ – ಶಿವೇಶ್ ಕುಮಾರ್ ರಾಮ್ – ಬಿಹಾರ
ಎಸ್ಟಿ ಮೋರ್ಚಾ – ಡಾ. ಮನ್ನಾಲಾಲ್ ರಾವತ್ – ರಾಜಸ್ಥಾನ
ಅಲ್ಪಸಂಖ್ಯಾತ ಮೋರ್ಚಾ – ಕುಂವರ್ ಬಾಸಿತ್ ಅಲಿ – ಉತ್ತರ ಪ್ರದೇಶ

ಇತರೆ ಪ್ರಮುಖ ಹುದ್ದೆಗಳು:
ಮಾಧ್ಯಮ ಸಂಯೋಜಕ – ಅನಿಲ್ ಬಲೂನಿ (ಉತ್ತರಾಖಂಡ)
ರಾಷ್ಟ್ರೀಯ ಕಾರ್ಯಾಲಯ ಪ್ರಭಾರಿ – ತರುಣ್ ಚುಗ್ (ಪಂಜಾಬ್)
ರಾಷ್ಟ್ರೀಯ ಕಾರ್ಯಾಲಯ ಮಂತ್ರಿ – ಮಹೇಂದ್ರ ಪಾಂಡೆ (ಉತ್ತರಾಖಂಡ)
ಸೋಷಿಯಲ್ ಮೀಡಿಯಾ ಸಂಯೋಜಕ – ದೀಪಕ್ (ಛತ್ತೀಸ್‌ಗಢ)

- Advertisement -

Related news

error: Content is protected !!