Wednesday, April 23, 2025
spot_imgspot_img
spot_imgspot_img

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಹೊತ್ತಿ ಉರಿದ ಲಾರಿ; ಚಾಲಕನಿಗೆ ಗಾಯ..!

- Advertisement -
- Advertisement -

ಬಂಟ್ವಳ: ತಂಪು ಪಾನೀಯ ಸಾಗಾಟದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಬಿದ್ದ ಪರಿಣಾಮ ಬೆಂಕಿ ಕಾಣಿಸಿಕೊಂಡು ಲಾರಿಯ ಚಕ್ರಗಳು ಸೇರಿದಂತೆ ಒಂದಷ್ಟು ಭಾಗ ಹೊತ್ತಿ ಉರಿದ ಘಟನೆ ಬಂಟ್ವಾಳದ ರಾ.ಹೆ.75ರ ಮಾಣಿ ಸಮೀಪದ ಸತ್ತಿಕಲ್ಲಿನಲ್ಲಿ ನಡೆದಿದೆ.

ಘಟನೆಯಲ್ಲಿ ಲಾರಿ ಚಾಲಕ ಇರ್ಫಾನ್(37) ಗಾಯಗೊಂಡಿದ್ದು ಪುತ್ತೂರು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಗೂಡಿನ ಬಳಿಯ ಅಥಾವುಲ್ಲ ಅವರಿಗೆ ಸೇರಿದ ಸಂಸ್ಥೆಯಿಂದ ತಂಪು ಪಾನೀಯಗಳನ್ನು ಲಾರಿಯ ಮೂಲಕ ಸಾಗಾಟ ಮಾಡಲಾಗುತ್ತಿದ್ದು, ಸತ್ತಿಕಲ್ಲಿನಲ್ಲಿ ಲಾರಿ ಪಲ್ಟಿಯಾಗಿದೆ. ಪಲ್ಟಿಯಾಗುವ ವೇಳೆ ಸ್ಪಾರ್ಕ್ ಆಗಿ ಬೆಂಕಿ ಕಾಣಿಸಿಕೊಂಡು ಟಯರ್‌ಗಳಿಗೆ ಹಿಡಿದಿದ್ದು ಜತೆಗೆ ಇತರ ಭಾಗಗಳು ಕೂಡ ಹೊತ್ತಿ ಉರಿದಿದೆ. ಬೆಂಕಿಯು ತಂಪು ಪಾನೀಯಗಳ ಬಾಟಲ್ ಗಳಿಗೂ ಹಿಡಿದು ಸಾಕಷ್ಟು ಬಾಟಲ್ ಗಳು ಹೊತ್ತಿದೆ.

ಲಾರಿಯಲ್ಲಿ ದೊಡ್ಡ ಪ್ರಮಾಣದಲ್ಲಿ ತಂಪು ಪಾನೀಯ ತುಂಬಿದ ಬಾಟಲ್‌ಗಳಿದ್ದು ಲಾರಿ ಬಿದ್ದ ರಭಸಕ್ಕೆ ಸಂಪೂರ್ಣವಾಗಿ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

- Advertisement -

Related news

error: Content is protected !!