Tuesday, June 23, 2026
spot_imgspot_img
spot_imgspot_img

ಗಂಡನ ತೊರೆದು ಪ್ರಿಯಕರನೊಂದಿಗೆ ಮದುವೆ: ನಡೆಯಿತು ಪ್ರಿಯಕರನ ಭೀಕರ ಹತ್ಯೆ!

- Advertisement -
- Advertisement -

ಬೆಂಗಳೂರು: ಗಂಡನನ್ನು ತೊರೆದು ಪ್ರಿಯಕರನೊಂದಿಗೆ ಮತ್ತೇ ಮದುವೆಯಾಗಿದ್ದ ಯುವತಿಯ ಮನೆಯವರು ಆಕೆಯ ಪ್ರಿಯಕರನನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ.

ಬೆಂಗಳೂರಿನ ಲಗ್ಗೆರೆಯಲ್ಲಿ 27 ವರ್ಷದ ಚೇತನ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಚೇತನ್ ಪತ್ನಿಯ ಸಹೋದರ ಆಕಾಶ್ ಮತ್ತು ಚಿಕ್ಕಪ್ಪ ನಂಜೇಗೌಡ ಹಾಗೂ ಚಿಕ್ಕಪ್ಪನ ಮಗ ದಿಲೀಪ್ ಕೊಲೆ ಮಾಡಿದ ಆರೋಪಿಗಳು.

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಭೂಮಿಕಾ ಮತ್ತು ಹನುಮಂತನಗರದ ಚೇತನ್ ಪ್ರೀತಿಸಿದ್ದರು. ಇವರ ಮದುವೆಗೆ ಹುಡುಗಿ ಮನೆಯಲ್ಲಿ ಒಪ್ಪಿಗೆ ನೀಡಲಿಲ್ಲ. ಬೆಸ್ಕಾಂ ಉದ್ಯೋಗಿಯೊಂದಿಗೆ ಭೂಮಿಕಾ ಮದುವೆ ಮಾಡಲಾಗಿದ್ದು, 15 ದಿನದಲ್ಲಿ ಗಂಡನ ಮನೆಯಿಂದ ಓಡಿ ಬಂದ ಆಕೆ ಪ್ರಿಯಕರನೊಂದಿಗೆ ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದರು.

ಭೂಮಿಕಾ -ಚೇತನ್ ಮನೆಗೆ ಬಂದಿದ್ದ ಆರೋಪಿಗಳು ಭೂಮಿಕಾಳನ್ನು ಹೊರಗೆ ಕಳುಹಿಸಿ ಚೇತನ್ ನನ್ನು ಹತ್ಯೆಮಾಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

- Advertisement -

Related news

error: Content is protected !!