Wednesday, April 24, 2024
spot_imgspot_img
spot_imgspot_img

ಲವ್ ಜಿಹಾದ್ ತಡೆಗಟ್ಟಲು ಕಠಿಣ ಕಾನೂನು ರೂಪಿಸುವಂತೆ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ಮನವಿ

- Advertisement -G L Acharya panikkar
- Advertisement -

ಬಂಟ್ವಾಳ (ನ 11): ಲವ್ ಜಿಹಾದ್ ತಡೆಗಟ್ಟಲು ಕಠಿಣ ಕಾನೂನು ರೂಪಿಸುವಂತೆ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ಉಪತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ನೀಡಲಾಯಿತು.

ದೇಶದಾದ್ಯಂತ `ಲವ್‍ಜಿಹಾದ್’ ನ ಪ್ರಕರಣಗಳು ಅಪಾಯಕಾರಿಯಾಗಿ, ವಿಪರೀತವಾಗಿ ಹೆಚ್ಚುತ್ತಿದ್ದು ಮುಗ್ಧ ಅಮಾಯಕ ಹಿಂದೂ ಯುವತಿಯರು ಈ ಷಡ್ಯಂತ್ರಕ್ಕೆ ಬಲಿಯಾಗುತ್ತಿರುವುದು ಇಡೀ ಹಿಂದೂ ಸಮಾಜಕ್ಕೆ ಆತಂಕವನ್ನುಂಟು ಮಾಡಿದೆ. ಅದೇ ರೀತಿ ಕರ್ನಾಟಕದಲ್ಲಿಯೂ ಸಹ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಲವ್ ಜಿಹಾದಿನ ಪ್ರಕರಣಗಳು ವ್ಯವಸ್ಥಿತ ರೀತಿಯಲ್ಲಿ ಹೆಚ್ಚಾಗುತ್ತಿದ್ದು, ಹಿಂದೂ ಸಮಾಜದ ಎಲ್ಲಾ ಜಾತಿ- ವರ್ಗಗಳ ಮುಗ್ಧ ಹೆಣ್ಣು ಮಕ್ಕಳು ಈ ಸಂಚಿಗೆ ಬಲಿಯಾಗುತ್ತಿದ್ದಾರೆ. ಈ ಕಾರಣದಿಂದಲೇ ರಾಜ್ಯದಲ್ಲಿ ಕೋಮು-ಸಂಘರ್ಷ, ಆತ್ಮಹತ್ಯೆ ಹಾಗೂ ಹಲ್ಲೆ, ಕೊಲೆಗಳಂತಹ ಪ್ರಕರಣಗಳು ಹೆಚ್ಚುತ್ತಿವೆ. ಸಂಪೂರ್ಣ ವಿಶ್ವಕ್ಕೆ ಸವಾಲಾಗಿರುವ ಹಾಗೂ ಭಾರತವನ್ನು ಸಂಪೂರ್ಣವಾಗಿ ಇಸ್ಲಾಮಿಕರಿಸುವ ಸಂಚಿನಿಂದ ಕೂಡಿದ ಮತಾಂಧ ಇಸ್ಲಾಮಿಕ್ ಜಿಹಾದಿನ ಕರಾಳ ಹೆಜ್ಜೆಗಳಾದ ಭಯೋತ್ಪಾದನೆ, ಮತಾಂತರ, ಜನಸಂಖ್ಯೆ ಹೆಚ್ಚಳ, ಬಹುಪತ್ನಿತ್ವ, ಅಕ್ರಮ ಪ್ರವೇಶ, ಒಳನುಸುಳುವಿಕೆ, ಭೂಕಬಳಿಕೆ ಇತ್ಯಾದಿಗಳಂತೆಯೇ ಪ್ರೀತಿ- ಪ್ರೇಮದ ಹೆಸರಿನಲ್ಲಿ ಯುವತಿಯರನ್ನು ಇಸ್ಲಾಂಗೆ ಮತಾಂತರಿಸುವುದು ಸಹ ಜಿಹಾದಿನ ಪ್ರಮುಖ ಅಂಗವಾಗಿದೆ ಎಂಬುದು ಸಾಬೀತಾಗಿದೆ.

ಕಾಲೇಜಿನ ಕ್ಯಾಂಪಸ್‍ಗಳು, ಮಹಿಳಾ ಹಾಸ್ಟೆಲ್‍ಗಳು, ಹೋಟೆಲ್, ಸಿನಿಮಾಗಳು, ಬ್ಯೂಟಿಪಾರ್ಲರ್‍ಗಳು, ಮೊಬೈಲ್ ಸೆಂಟರ್‍ಗಳು, ಮಹಿಳೆಯರು ಹೆಚ್ಚಾಗಿ ಬರುವ ವ್ಯಾಪಾರ ವ್ಯವಹಾರ ಕೇಂದ್ರಗಳು ಮುಂತಾದವುಗಳನ್ನು ಗುರಿಯಾಗಿಟ್ಟುಕೊಂಡು ಸಂಚು ರೂಪಿಸಿ , ಯುವತಿಯರನ್ನು ಮೋಸದ ಪ್ರೇಮ ಪಾಶಕ್ಕೆ ಬಲಿಯಾಗುವಂತೆ ಮಾಡಲಾಗುತ್ತಿದೆ. ಪ್ರೀತಿ, ಪ್ರೇಮ, ಅತ್ಯಾಚಾರ, ವಿಹಾರ, ಮೋಜು ಮಸ್ತಿ, ಹೋಟೆಲ್, ಸಿನಿಮಾ ಇತ್ಯಾದಿಗಳಿಂದ ಪ್ರಾರಂಭಗೊಂಡು ಕೊನೆಗೆ ಒತ್ತಡ, ಬೆದರಿಕೆ ಬ್ಲಾಕ್‍ಮೇಲ್, ಅಪಹರಣ ಇತ್ಯಾದಿ ಹಂತದವರೆಗೊ ತಲುಪಿ ಅಕ್ರಮ ಮದುವೆ ಮುಖಾಂತರ ಕೃತ್ಯಗಳು ನಡೆಯುತ್ತಿದೆ. ಈ ಕರಾಳ ಮುಖಗಳಿಂದ ಕೂಡಿದ ಮೇಲ್ನೋಟಕ್ಕೆ ಪ್ರೀತಿ ಪ್ರೇಮದ ಮುಖವಾಡ ಹೊಂದಿದ ಇಸ್ಲಾಮಿಕ್ ಜಿಹಾದಿನ ಭಾಗವಾಗಿರುವ ಲವ್ ಜಿಹಾದ್ ಅನ್ನು ತಡೆಗಟ್ಟಲು ಕಠಿಣ ಕಾನೂನು ರೂಪಿಸಿ ಮುಗ್ಧ ಅಮಾಯಕ ಹಿಂದೂ ಯುವತಿಯರನ್ನು, ಹಿಂದೂ ಕುಟುಂಬಗಳನ್ನು ಹಿಂದೂ ಸಂಸ್ಕೃತಿ ಸಮಾಜವನ್ನು ಸಂರಕ್ಷಿಸಬೇಕೆಂದು ವಿನಂತಿಸುತ್ತೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಮೇಲ್ಕಂಡ ಎಲ್ಲಾ ಸಮಸ್ಯೆಗಳು ಸವಾಲುಗಳು ಹೆಚ್ಚಾಗುತ್ತಿರುವುದರಿಂದ ತಕ್ಷಣಕ್ಕೆ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಕೂಡಲೇ ಲವ್‍ಜಿಹಾದ್ ತಡೆಗಟ್ಟಲು ಮತ್ತು ಮತಾಂತರ ನಿಷೇದ ಕಾನೂನು ಜಾರಿಗೆ ತರುವಂತೆ ತಮ್ಮಲ್ಲಿ ಆಗ್ರಹಿಸುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಗೋರಕ್ಷ ಪ್ರಮುಖ್ ಆಶೋಕ್ ಶೆಟ್ಟಿ ಸರಪಾಡಿ ತಿಳಿಸಿದ್ದಾರೆ.


ಈ ಸಂದರ್ಭದಲ್ಲಿ ಧರ್ಮ ಪ್ರಸರಣ ಪ್ರಮುಖ್ ರಾಜಾರಾಮ್ ನಾಯಕ್, ಭಜರಂಗದಳದ ಸಹಸಂಚಾಲಜ ಭರತ್ ಕುಮ್ಡೆಲು, ಜಿಲ್ಲಾ ಸಹಸಂಯೋಜಕ್ ಗುರುರಾಜ್ ಬಂಟ್ವಾಳ, ತಾಲೂಕು ಸಂಚಾಲಕ ಶಿವಪ್ರಸಾದ್ ತುಂಬೆ, ಪ್ರಮುಖರಾದ ಲತೀಶ್ ರಾಮಲಕಟ್ಟೆ, ಜಿತೇಂದ್ರ ಅಜ್ಜಿಬೆಟ್ಟು, ವಿಶುಕುಲಾಲ್, ಸಂತೋಷ್ ಕುಲಾಲ್ ಉಪಸ್ಥಿತರಿದ್ದರು.

- Advertisement -

Related news

error: Content is protected !!