Friday, June 5, 2026
spot_imgspot_img
spot_imgspot_img

ಪುತ್ತೂರು: ರಾಯಚೂರು ಮೂಲದ ಯುವಕನಿಗೆ ಹಲ್ಲೆ ನಡೆಸಿದ ಇಬ್ಬರು ಅರೆಸ್ಟ್!

- Advertisement -
- Advertisement -
driving

ಪುತ್ತೂರು: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವತಿಯನ್ನು ಭೇಟಿಯಾಗಲು ಲಾಡ್ಜಿನಲ್ಲಿ ರೂಂ ಬುಕ್ ಮಾಡಲು ಬಂದ ರಾಯಚೂರಿನ ಯುವಕನಿಗೆ ಪುತ್ತೂರಿನ ಹಿಂದೂಸ್ಥಾನ್ ಲಾಡ್ಜ್ ನ ಮುಂಬಾಗ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಪುತ್ತೂರಿನ ಯುವತಿಯ ಭೇಟಿಯಾಗಲು ಪುತ್ತೂರು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ಬಂದಿದ್ದ ರಾಯಚೂರಿನ ಯುವಕ ಮತ್ತು ಆತನ ಸ್ನೇಹಿತನ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದರು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಹಲ್ಲೆ ನಡೆಸಿದ್ದ ತಂಡದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.

- Advertisement -

Related news

error: Content is protected !!