Friday, June 19, 2026
spot_imgspot_img
spot_imgspot_img

ಸೆಮಿಫೈನಲ್ ನಲ್ಲಿ ಸೋತ ಭಾರತೀಯ ಮಹಿಳಾ ಬಾಕ್ಸರ್; ಕಂಚು ಗೆದ್ದ ಲವ್ಲಿನಾ..!

- Advertisement -
- Advertisement -

ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಲಭ್ಯವಾಗಿದೆ. ಬಾಕ್ಸರ್ ಲವ್ಲಿನಾ ಬೊರ್ಗೊಹೆನ್ ದೇಶಕ್ಕೆ ಮೂರನೇ ಪದಕ ತಂದುಕೊಟ್ಟಿದ್ದಾರೆ. ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ದೇಶಕ್ಕೆ ಬೆಳ್ಳಿ ಪದಕ ಗೆದ್ದ ಬಳಿಕ ಪಿ. ವಿ ಸಿಂಧು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು. ಮತ್ತೆ ಮಹಿಳೆಯರದ್ದೇ ಪಾರುಪಥ್ಯವಿದೆ.

ಮಹಿಳೆಯರ 69 ಕೆಜಿ ವಿಭಾಗದ ಬಾಕ್ಸಿಂಗ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಲವ್ಲಿನಾ ಬೊರ್ಗೊಹೆನ್ ಅವರು ಚೈನೀಸ್ ತೈಪೆಯ ಚೆನ್ ನಿಯೆನ್-ಚಿನ್ ವಿರುದ್ಧ 4-1 ಅಂತರದಲ್ಲಿ ಜಯ ಗಳಿಸಿದ್ದರು. ಈ ಗೆಲುವಿನೊಂದಿಗೆ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದ್ದರು. ಟರ್ಕಿಯ ಪ್ರಬಲ ಸ್ಪರ್ಧಿ ಬುಸೆನಾಜ್ ಸುರ್ಮೆನೆಲಿ ವಿರುದ್ಧ ಸೆಣಸಾಡಿ ಸೋತಿದ್ದಾರೆ. ಆದರೂ ಸಹ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ ಲವ್ಲಿನಾ..!

- Advertisement -

Related news

error: Content is protected !!