Tuesday, May 21, 2024
spot_imgspot_img
spot_imgspot_img

ಸಮ್ಮತಿಯ ಲೈಂಗಿಕ ಸಂಬಂಧಕ್ಕೆ ಅಧಿಕೃತ ವಯಸ್ಸು 18 ರಿಂದ 16ಕ್ಕೆ ಇಳಿಕೆ: ಕೇಂದ್ರಕ್ಕೆ ಮನವಿ ಸಲ್ಲಿಸಿದ ಹೈಕೋರ್ಟ್

- Advertisement -G L Acharya panikkar
- Advertisement -

ಸಹಮತದ ಲೈಂಗಿಕ ಸಂಬಂಧಕ್ಕೆ ಹೆಣ್ಣಿನ ವಯಸ್ಸನ್ನು 18ರಿಂದ 16 ವರ್ಷಕ್ಕೆ ಇಳಿಸಬೇಕೆಂದು ಮಧ್ಯಪ್ರದೇಶ ಹೈಕೋರ್ಟ್‌ನ ಗ್ವಾಲಿಯರ್ ಪೀಠವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

ಬಾಲಕಿ ಮೇಲಿನ ಅತ್ಯಾಚಾರ, ಗರ್ಭಧರಿಸಿದ ಪ್ರಕರಣದಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ದಾಖಲಾದ ಎಫ್‌ಐಆರ್ ಅನ್ನು ರದ್ದುಪಡಿಸಿ ಅದೇಶ ನೀಡಿದ ನ್ಯಾಯಮೂರ್ತಿ ದೀಪಕ್ ಕುಮಾರ್‌ ಅಗರ್‌ವಾಲ್ ನೇತೃತ್ವದ ನ್ಯಾಯಪೀಠವು, ಈ ಮೇಲಿನಂತೆ ಕೇಂದ್ರ ಸರ್ಕಾರವನ್ನು ಕೋರಿದೆ.

‘ಈಚೆಗೆ, ಸಾಮಾಜಿಕ ಮಾಧ್ಯಮ ಜಾಗೃತಿಯಿಂದಾಗಿ ಹೆಣ್ಣಾಗಲೀ ಗಂಡಾಗಲೀ 14ನೇ ವರ್ಷಕ್ಕೇ ಪ್ರೌಢಾವಸ್ಥೆಗೆ ತಲುಪುತ್ತಿದ್ದಾರೆ. ಚಿಕ್ಕವಯಸ್ಸಿನಲ್ಲೇ ಪ್ರೌಢಾವಸ್ಥೆ ತಲುಪುತ್ತಿರುವುದು ಪರಸ್ಪರ ಆಕರ್ಷಿತರಾಗಿ ಒಪ್ಪಿತ ದೈಹಿಕ ಸಂಬಂಧಕ್ಕೆ ಕಾರಣವಾಗುತ್ತಿದೆ. ಆದರೆ, ಸಹಮತದ ಲೈಂಗಿಕ ಸಂಬಂಧಕ್ಕೆ ಹೆಣ್ಣಿನ ವಯಸ್ಸು 18ಕ್ಕೆ ನಿಗದಿಪಡಿಸಿರುವುದರಿಂದ ಬಾಲಕರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತಿದೆ’ ಎಂದು ಪೀಠ ಅಭಿಪ್ರಾಯಪಟ್ಟಿದೆ.

‘ಒಪ್ಪಿತ ದೈಹಿಕ ಸಂಬಂಧಕ್ಕೆ ಹೆಣ್ಣಿನ ವಯಸ್ಸನ್ನು 18ರಿಂದ 16 ವರ್ಷಕ್ಕೆ ಇಳಿಸಲು ಚಿಂತನೆ ನಡೆಸಬೇಕು. ಕಾನೂನು ತಿದ್ದುಪಡಿಯ ಮೂಲಕ ಈ ಅನ್ಯಾಯ ಸರಿಪಡಿಸಬೇಕು’ ಎಂದು ಪೀಠ ಹೇಳಿದೆ.

- Advertisement -

Related news

error: Content is protected !!