Saturday, May 18, 2024
spot_imgspot_img
spot_imgspot_img

ಮಾಣಿ: ಬುಡೋಳಿ ಶೇರಾ ಖಿಳ್ರ್ ಜುಮ್ಮಾ ಮಸೀದಿಯ ವಠಾರದಲ್ಲಿ ಸಾವಿರಾರು ಪ್ರತಿಭೆಗಳ ಕಲರವ; ಎಸ್ಸೆಸ್ಸೆಫ್ ‌ಮಾಣಿ ಸೆಕ್ಟರ್” ಸಾಹಿತ್ಯೋತ್ಸವ ” ಪಾಟ್ರಕೋಡಿ ಯುನಿಟ್ ಚಾಂಪಿಯನ್,ಸೂರಿಕುಮೇರು ಯುನಿಟ್ ರನ್ನರ್ಸ್

- Advertisement -G L Acharya panikkar
- Advertisement -

ಮಾಣಿ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ವತಿಯಿಂದ “ನಿರೀಕ್ಷೆಗಳ ನೀಲ ನಕ್ಷೆ ” ಎಂಬ ಧ್ಯೇಯ ವಾಕ್ಯದಡಿ ನಡೆದ ಸಾಹಿತ್ಯೋತ್ಸವ ಕಾರ್ಯಕ್ರಮ ಬುಡೋಳಿ ಶೇರಾ ಖಿಳ್ರ್ ಜುಮ್ಮಾ ಮಸೀದಿಯ ವಠಾರದಲ್ಲಿ ಡಿಸೆಂಬರ್ 17 ಆದಿತ್ಯವಾರದಂದು ನಡೆಯಿತು.

ಪೇರಮೊಗರು ಗೈಬಾನ್ ಷಾ ಫೀರ್ ವಲಿಯುಲ್ಲಾಹ್ ದರ್ಗಾ ಝಿಯಾರತ್ ನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇಬ್ರಾಹಿಂ ಹಾಜಿ ಶೇರಾ ಧ್ವಜಾರೋಹಣಗೈದರು, ಎಸ್‌ವೈ‌ಎಸ್ ಮಾಣಿ ಸರ್ಕಲ್ ಅಧ್ಯಕ್ಷ ಹೈದರ್ ಸಖಾಫಿ ಶೇರಾ ಕಾರ್ಯಕ್ರಮ ಉದ್ಘಾಟಿಸಿದರು, ಸಯ್ಯಿದ್ ಸಾದಾತ್ ತಂಙಳ್ ಕರ್ವೇಲ್ ದುಆ ಮಾಡಿದರು, ಕಾರ್ಯಕ್ರಮದಲ್ಲಿ ಡಿವಿಶನ್ ನಾಯಕರಾದ ಅಬ್ದುಲ್ ಕರೀಂ ಬಾಹಸನಿ,ಮುಹ್ಸಿನ್ ಕಟ್ಟತ್ತಾರ್, ಕೆ ಪಿ ಕಲಂದರ್ ಪಾಟ್ರಕೋಡಿ,ಮುಸ್ಲಿಂ ಜಮಾ‌ಅತ್ ನಾಯಕರಾದ ಕಾಸಿಂ ಹಾಜಿ ಪರ್ಲೋಟು, ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ, ಕೆ ಪಿ ಕಾಸಿಂ ಪಾಟ್ರಕೋಡಿ, ಅಬ್ದುಲ್ ಕರೀಂ ಸೂರಿಕುಮೇರು, ಎಸ್‌ವೈ‌ಎಸ್ ಮಾಣಿ ಸರ್ಕಲ್ ಕಾರ್ಯದರ್ಶಿ ಸಲೀಂ ಮಾಣಿ, ಸಾಂತ್ವನ ಕಾರ್ಯದರ್ಶಿ ಸಾಜಿದ್ ಪಾಟ್ರಕೋಡಿ, ಅಬ್ಬಾಸ್ ನೇರಳಕಟ್ಟೆ, ಶಾಹುಲ್ ಹಮೀದ್ ಪರ್ಲೋಟು, ಯೂಸುಫ್ ಕೊಡಾಜೆ, ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಅಧ್ಯಕ್ಷ ಉಸೈದ್ ಸಖಾಫಿ ಸೂರ್ಯ, ಕಾರ್ಯದರ್ಶಿ ಸಾಬಿತ್ ಪಾಟ್ರಕೋಡಿ, ಕೋಶಾಧಿಕಾರಿ ನುಅ‌್‌ಮಾನ್ ನೇರಳಕಟ್ಟೆ, ಇಬ್ರಾಹಿಂ ಮದನಿ ಶೇರಾ, ಹಬೀಬ್ ಶೇರಾ, ಎಸ್ ಉಮ್ಮರ್ ಪೆರಾಜೆ ಬುಡೋಳಿ,ಅಬ್ದುಲ್ ಖಾದರ್ ಶೇರಾ, ಇಸ್ಮಾಯಿಲ್ ಹಾಜಿ ಬುಡೋಳಿ, ಜಲೀಲ್ ಮುಸ್ಲಿಯಾರ್ ಬುಡೋಳಿ,ಇ ಬ್ರಾಹಿಂ ಮುಸ್ಲಿಯಾರ್ ಮಾಣಿ, ಆಶಿಕ್ ಹಿಕಮಿ ಶೇರಾ, ಹಾಫಿಳ್ ಸುಹೈಲ್ ಶೇರಾ, ಕಲಂದರ್ ಬುಡೋಳಿ, ಮುಂತಾದವರು ಭಾಗವಹಿಸಿದರು.

ಮೂರು ವೇದಿಕೆಗಳಲ್ಲಿ ವಿವಿಧ ವಿಭಾಗದಲ್ಲಿ ನಡೆದ ಸಾಹಿತ್ಯ ಸ್ಪರ್ಧೆಯಲ್ಲಿ ಪಾಟ್ರಕೋಡಿ ಯುನಿಟ್ ತಂಡವು ಸತತವಾಗಿ ನಾಲ್ಕನೇ ಬಾರಿ ಚಾಂಪಿಯನ್ ಪಟ್ಟವನ್ನು ಗೆಲ್ಲುವ ಮೂಲಕ ದಾಖಲೆ ನಿರ್ಮಿಸಿತು. ಸೂರಿಕುಮೇರು ಯುನಿಟ್ ರನ್ನರ್ಸ್ ಚಾಂಪಿಯನ್ ಪಡೆಯಿತು, ಶಫೀಉಲ್ಲಾಹ್ ತಂಙಳ್, ಅಬ್ದುರ್ರಹ್ಮಾನ್ ಮದೀನಿ, ಸಿನಾನ್ ,ಆಸಿಫ್ ವೇಣೂರು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.ಮುಸ್ತಫಾ ಬುಡೋಳಿ ಸ್ವಾಗತಿಸಿ, ಹಾರಿಸ್ ಮದನಿ ಪಾಟ್ರಕೋಡಿ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!