Thursday, June 25, 2026
spot_imgspot_img
spot_imgspot_img

ಸ್ನಾನಕ್ಕೆಂದು ತೆರಳಿದ 16 ವರ್ಷದ ಬಾಲಕ ನೀರಿನಲ್ಲಿ ಮುಳುಗಿ ಸಾವು!

- Advertisement -
- Advertisement -

ಮಡಿಕೇರಿ: ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕು ಹೊಸತೋಟ ಎಂಬಲ್ಲಿ ಸ್ನಾನಕ್ಕೆಂದು ತೆರಳಿದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ವಿಷಯ ತಿಳಿದ ಆತನ ಅಜ್ಜಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಹೊಸತೋಟ ನಿವಾಸಿ ರಮಲಾನ್ ಹಾಗೂ ಅಪ್ಸತ್ ರವರ ಪುತ್ರ 16 ವರ್ಷದ ಬಾಲಕ ಮುಬಶಿರ್ ಎಂಬಾತ ಸ್ನೇಹಿತರೊಂದಿಗೆ ಹೊಸತೋಟ ಬಳಿ ಸ್ನಾನಕ್ಕೆಂದು ನಿನ್ನೆ ಮುಂಜಾನೆ 10 ಗಂಟೆಗೆ ತೆರಳಿದ್ದರು ಎನ್ನಲಾಗಿದೆ.

ಈ ಸಂದರ್ಭದಲ್ಲಿ ಆಯತಪ್ಪಿ ಮುಳುಗಿದ ಬಾಲಕ ಕಣ್ಮರೆಯಾಗಿದ್ದ. ನಿನ್ನೆಯಿಂದ ಹುಡುಕಾಟ ನಡೆಸಿದ ಸ್ಥಳೀಯರು ಮತ್ತು ಪೊಲೀಸರು ಇಂದು ಮುಂಜಾನೆ ಬಾಲಕನ ಮೃತದೇಹ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಬಾಲಕ ಮುಳುಗಿದ ವಿಷಯ ತಿಳಿದ ಅಜ್ಜಿ ರುಕ್ಕಿಯ 62 ವರ್ಷ ಎಂಬುವವರು ಕುಸಿದುಬಿದ್ದು ನಿಧನರಾದ ಘಟನೆ ನಡೆದಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಮುಂದಿನ ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!