Saturday, October 10, 2026
spot_imgspot_img
spot_imgspot_img

ಮಡಿಕೇರಿ ದಸರಾ :ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದ ವತಿಯಿಂದ ಒಂದು ದಿನದ ವಿಶೇಷ ಪ್ಯಾಕೇಜ್ ಟೂ‌ರ್

- Advertisement -
- Advertisement -

ಮಡಿಕೇರಿ:-ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕ.ರಾ.ರ.ಸಾ.ನಿ) ಪುತ್ತೂರು ವಿಭಾಗದ ವತಿಯಿಂದ ಇದೇ ಪ್ರಥಮ ಬಾರಿಗೆ ಮಡಿಕೇರಿ ದಸರಾ ಪ್ರಯುಕ್ತ ಕೊಡಗು ಜಿಲ್ಲೆಯ ವಿವಿಧ ಪ್ರೇಕ್ಷಣೀಯ ಸ್ಥಳಗಳನ್ನೊಳಗೊಂಡ ಒಂದು ದಿನದ ವಿಶೇಷ ಪ್ಯಾಕೇಜ್ ಟೂ‌ರ್ ಅನ್ನು ಆಯೋಜಿಸಲಾಗಿದೆ.

ಅಕ್ಟೋಬರ್ 11 ರಿಂದ ಅಕ್ಟೋಬರ್ 26 ರವರೆಗೆ ಈ ವಿಶೇಷ ಬಸ್ ಸೌಲಭ್ಯ ಲಭ್ಯವಿರಲಿದೆ. ಸಾರ್ವಜನಿಕ ಪ್ರವಾಸಿಗರಿಗಾಗಿ ಎರಡು ವಿಭಿನ್ನ ಮಾರ್ಗ ಸಿದ್ಧಪಡಿಸಲಾಗಿದೆ.

ಕಾವೇರಿ ದರ್ಶನ: ಮಡಿಕೇರಿ ಬಸ್ ನಿಲ್ದಾಣದಿಂದ ಬೆಳಗ್ಗೆ 06:30 ಕ್ಕೆ ನಿರ್ಗಮಿಸುತ್ತದೆ. ಓಂಕಾರೇಶ್ವರ ದೇವಸ್ಥಾನ, ಇಗ್ಗುತ್ತಪ್ಪ ದೇವಸ್ಥಾನ, ಭಾಗಮಂಡಲ ದೇವಸ್ಥಾನ, ತಲಕಾವೇರಿ ದೇವಸ್ಥಾನ, ಅಬ್ಬಿ ಜಲಪಾತ ಹಾಗೂ ರಾಜಾಸೀಟು ಭೇಟಿ ನೀಡುವ ಪ್ರೇಕ್ಷಣೀಯ ಸ್ಥಳಗಳು.

ಮಡಿಕೇರಿ ಬಸ್ ನಿಲ್ದಾಣದಿಂದ ಬೆಳಗ್ಗೆ 06:30 ಗಂಟೆಗೆ ನಿರ್ಗಮಿಸುತ್ತದೆ. ಸಂದರ್ಶಿಸುವ ಸ್ಥಳಗಳು: ಓಂಕಾರೇಶ್ವರ ದೇವಸ್ಥಾನ, ಹಾರಂಗಿ ಜಲಾಶಯ/ ಆನೆ ಕ್ಯಾಂಪ್, ಗೋಲ್ಡನ್ ಟೆಂಪಲ್, ಕಾವೇರಿ ನಿಸರ್ಗಧಾಮ, ಕಾಫಿ ತೋಟಗಳು (ಕಾಫಿ ಪ್ಲಾಂಟೇಷನ್), ಅಬ್ಬಿ ಜಲಪಾತ ಮತ್ತು ರಾಜಾಸೀಟು.

ಪ್ರಯಾಣ ದರ ಮತ್ತು ಸೌಲಭ್ಯಗಳು: ದರ
ವಯಸ್ಕರಿಗೆ ರೂ. 400 ಹಾಗೂ ಮಕ್ಕಳಿಗೆ ರೂ.300 ನಿಗದಿಪಡಿಸಲಾಗಿದೆ (ಊಟೋಪಹಾರ ಮತ್ತು ಪ್ರವೇಶ ಶುಲ್ಕ ಹೊರತುಪಡಿಸಿ). ಸಮಯ ಬೆಳಗ್ಗೆ 06:30 ಕ್ಕೆ ಹೊರಡುವ ಈ ಬಸ್ಸುಗಳು ರಾತ್ರಿ 19:30 ರ ಸುಮಾರಿಗೆ ಮಡಿಕೇರಿ ಬಸ್ ನಿಲ್ದಾಣಕ್ಕೆ ವಾಪಸ್‌ ತಲುಪಲಿವೆ. ಪ್ರವಾಸಿಗರು ನಿಗಮದ ಅಧಿಕೃತ ವೆಬ್‌ಸೈಟ್ www.ksrtc.in ಮೂಲಕ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಿಕೊಳ್ಳಬಹುದು. ಕೊಡಗಿನ ರಮಣೀಯ ತಾಣಗಳನ್ನು ಕಣ್ಣುಂಬಿಕೊಳ್ಳಲು ಇಚ್ಛಿಸುವ ಪ್ರಯಾಣಿಕರು ಈ ವಿಶೇಷ ಒಂದು ದಿನದ ಪ್ಯಾಕೇಜ್ ಟೂರ್ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೆಎಸ್‌ಆಕ್ಟಿಸಿ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಪಿ. ಶ್ರೀಹರಿಬಾಬು ಕೋರಿದ್ದಾರೆ.

- Advertisement -

Related news

error: Content is protected !!