Friday, March 29, 2024
spot_imgspot_img
spot_imgspot_img

ಬೆಂಗಳೂರಿನಿಂದ ಮಾದಕ ವಸ್ತು ತಂದು ಕೊಡಗಿನಲ್ಲಿ ಮಾರಾಟ ಮಾಡುತ್ತಿದ್ದ ಪ್ರಕರಣ- ವೆಸ್ಟ್ ಆಫ್ರಿಕಾದ ಒಪೊಂಗ್ ಬಂಧನ

- Advertisement -G L Acharya panikkar
- Advertisement -

ಮಡಿಕೇರಿ: ಬೆಂಗಳೂರಿನಿಂದ ಮಾದಕ ವಸ್ತು ತಂದು ಕೊಡಗಿನಲ್ಲಿ ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ. ವೆಸ್ಟ್ ಆಫ್ರಿಕಾದ ಘಾನಾ ಮೂಲದ ಒಪೊಂಗ್(29) ಬಂಧಿತ ಆರೋಪಿ.

ಆಗಸ್ಟ್ 28ರಂದು ಮಡಿಕೇರಿಯ ರಾಜಾಸೀಟ್ ಬಳಿ ಲಕ್ಷಾಂತರ ರೂಪಾಯಿ ಮೌಲ್ಯದ ಡ್ರಗ್ಸ್ ಮಾರಾಟ ಮಾಡಲು ಯತ್ನಿಸಿದ ತಂಡವನ್ನು ಪೊಲೀಸರು ಬಂಧಿಸಿದ್ದರು. ಅದರಲ್ಲಿ ಈತ ಎಸ್ಕೇಪ್ ಆಗಿದ್ದ. ಬೆಂಗಳೂರಿನ ಹೊರಮಾವಿನಲ್ಲಿ ಆರೋಪಿ ಇರುವ ಬಗ್ಗೆ ದೊರೆತ ಮಾಹಿತಿಯ ಮೇರೆಗೆ ಕಾರ್ಯಚರಣೆ ನಡೆಸಿದ ಡಿಸಿಐಬಿ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣದಲ್ಲಿ ಈವರೆಗೆ ಒಟ್ಟು 6 ಮಂದಿಯನ್ನು ಬಂಧಿಸಲಾಗಿದೆ.

- Advertisement -

Related news

error: Content is protected !!