Thursday, June 18, 2026
spot_imgspot_img
spot_imgspot_img

ರಾಜ್ಯ ಪೊಲೀಸ್‌ ಇಲಾಖೆಗೆ ಮೇಜರ್‌‌ ಸರ್ಜರಿ; 35 ಐಪಿಎಸ್ ಅಧಿಕಾರಿಗಳ ವರ್ಗಾವಣೆ..!

- Advertisement -
- Advertisement -

ಇಲ್ಲಿದೆ ಸಂಪೂರ್ಣ ವಿವರ:

ಬೆಂಗಳೂರು: 35 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.

ಕರ್ನಾಟಕ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಲಾಗಿದ್ದು, 35 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿ ಪಾಲನೆಯಾಗುತ್ತಿಲ್ಲ ಎಂಬ ಪ್ರತಿಪಕ್ಷಗಳ ಆರೋಪ ಒಂದೆಡೆಯಾದರೆ, ಮತ್ತೊಂದೆಡೆ ಜೈಲುಗಳಲ್ಲಿ ನಡೆಯುತ್ತಿರುವ ವಿಪರೀತ ಅಕ್ರಮಗಳ ಬಗ್ಗೆ ಸರಣಿ ವರದಿಗಳಾಗುತ್ತಿರುವ ಸಂದರ್ಭದಲ್ಲೇ ಪೊಲೀಸ್ ಇಲಾಖೆ ಈ ಕ್ರಮ ಕೈಗೊಂಡಿದೆ. ಅಪರಾಧ ವಿಭಾಗ, ಸಂಚಾರ ವಿಭಾಗ ಸೇರಿದಂತೆ ಬೆಂಗಳೂರಿನ ವಿವಿಧ ವಿಭಾಗಗಳಲ್ಲಿಯೂ ಸರ್ಜರಿ ನಡೆದಿದೆ.

ಐಪಿಎಸ್ ಅಧಿಕಾರಿಗಳ ವರ್ಗಾವಣೆ ವಿವರ (ವರ್ಗ ಮಾಡಿರುವ ಹುದ್ದೆ)

  1. ಚಂದ್ರಗುಪ್ತ – ಐಜಿಪಿ, ಈಶಾನ್ಯ ಕಲಬುರಗಿ
  2. ಅಜಯ್ ಹಿಲೋರಿ – ಜಂಟಿ ಪೊಲೀಸ್ ಆಯುಕ್ತ, ಅಪರಾಧ ವಿಭಾಗ
  3. ಎಂ.ಎನ್.ಅನುಚೇತ್ – ಡಿಐಜಿ ನೇಮಕಾತಿ ವಿಭಾಗ
  4. ಇಡಾ ಮಾರ್ಟಿನ್ ಮಾರ್ಬಾನಿಯಾಂಗ್ – ಡಿಐಜಿ, ಬೆಂಗಳೂರು ಪೊಲೀಸ್ ಹೆಡ್‌ಕ್ವಾರ್ಟಸ್್ರ
  5. ವರ್ತಿಕಾ ಕಟೀಯಾರ್ – ಬಳ್ಳಾರಿ ವಲಯ, ಡಿಐಜಿ
  6. ಕಾರ್ತಿಕ್ ರೆಡ್ಡಿ – ಜಂಟಿ ಪೊಲೀಸ್ ಆಯುಕ್ತ, ಸಂಚಾರ ವಿಭಾಗ
  7. KM ಶಾಂತರಾಜು – ಎಸ್‌ಪಿ, ಗುಪ್ತಚರ ಇಲಾಖೆ
  8. ಸಿರಿಗೌರಿ – ಎಸ್‌ಪಿ, ರಾಜ್ಯ ಅಪರಾಧ ದಾಖಲೆ ವಿಭಾಗ
  9. ಪರಶುರಾಮ್ – ಡಿಸಿಪಿ, ವೈಟ್ ಫೀಲ್ಡ್ ವಿಭಾಗ
  10. ಅನೂಪ್ ಶೆಟ್ಟಿ – ಬೆಂಗಳೂರು ಪಶ್ಚಿಮ ವಿಭಾಗ ಡಿಸಿಪಿ, ಸಂಚಾರ
  11. ಸುಮನ್.ಡಿ ಪನ್ನೆಕರ್ – ಡಿಸಿಪಿ, ಇಂಟಲಿಜೆನ್ಸ್
  12. ಶಿವಪ್ರಕಾಶ್ ದೇವರಾಜು – ಲೋಕಾಯುಕ್ತ ಎಸ್‌ಪಿ, ಬೆಂಗಳೂರು
  13. ಜಯಪ್ರಕಾಶ್ – ಬೆಂಗಳೂರು ಉತ್ತರ ಸಂಚಾರ ವಿಭಾಗ, ಡಿಸಿಪಿ
  14. ಎಂ.ನಾರಾಯಣ್ – ಎಲೆಕ್ಟ್ರಾನಿಕ್ ಸಿಟಿ ವಿಭಾಗ, ಡಿಸಿಪಿ
  15. ಅನಿತಾ.ಬಿ ಹದ್ದಣ್ಣನವರ್ – ಬೆಂಗಳೂರು ನೈಋತ್ಯ ವಿಭಾಗ ಡಿಸಿಪಿ
  16. ಅಕ್ಷಯ್ ಮಚೀಂದ್ರ – ಡಿಸಿಪಿ, ಬೆಂಗಳೂರೂ ಕೇಂದ್ರ ವಿಭಾಗ
  17. ನಾಗೇಶ್ – ಬೆಂಗಳೂರು ವಾಯುವ್ಯ ವಿಭಾಗ, ಡಿಸಿಪಿ
  18. ಸಿಮಿ ಮರೀಯ ಜಾರ್ಜ್ – ಡಿಸಿಪಿ, ದಕ್ಷಿಣ ವಿಭಾಗ ಸಂಚಾರ
  19. ಯತೀಶ್ ಎನ್ – ಸೂಪರ್‌ಡೆಂಟ್ ಆಫ್ ಪೊಲೀಸ್, ರೈಲ್ವೆಸ್
  20. ಸೈದಲು ಅಡಾವತ್ – ಸಿಐಡಿ, ಎಸ್‌ಪಿ
  21. ಶಿವಕುಮಾರ್ – AIGP ಪೊಲೀಸ್ ಹೆಡ್‌ಕ್ವಾಟರ್ ಬೆಂಗಳೂರು
  22. ವೈ.ಅಮರನಾಥ್ – ಕಮಾಂಡೆಂಟ್ ಫಸ್ಟ್ ಬೆಟಾಲಿಯನ್ KSRP
  23. ಶ್ರೀಹರಿ ಬಾಬು – ಬೆಂಗಳೂರು ಸಿಸಿಬಿ ಡಿಸಿಪಿ
  24. ಯಶೋಧ ವಟ್ಟಗೋಡಿ -ಎಸ್‌ಪಿ, ಹಾವೇರಿ
  25. ಸೌಮ್ಯಲತಾ – ಸಿಎಆರ್ ಹೆಡ್ ಕ್ವಾರ್ಟರ್ಸ್, ಡಿಸಿಪಿ
  26. ಅನ್‌ಶು ಕುಮಾರ್ – ಸ್ಥಳ ಕಾಯ್ದಿರಿಸಲಾಗಿದೆ.
  27. ಗುಂಜನ್ ಅರ್ಯಾ – ಎಸ್‌ಪಿ, ಧಾರವಾಡ
  28. ಬಾಬಾ ಸಾಬ್ ನ್ಯಾಮಗೌಡ – ಬೆಂಗಳೂರು ಉತ್ತರ ವಿಭಾಗ, ಡಿಸಿಪಿ
  29. ಎಂ.ಗೋಪಾಲ್ – ಜಂಟಿ ನಿರ್ದೇಶಕ, ಎಫ್‌ಎಸ್‌ಎಲ್ ಬೆಂಗಳೂರು
  30. ಸಿದ್ದಾರ್ಥ ಗೋಯಲ್ – ಎಸ್‌ಪಿ, ಬಾಗಲಕೋಟೆ
  31. ರೋಹನ್ ಜಗದೀಶ್ – ಎಸ್‌ಪಿ, ಗದಗ
  32. ಶಿವಾಂಶು ರಜಪೂತ – ಎಸ್‌ಪಿ, ಕೆಜಿಎಫ್
  33. ಜಿತೇಂದ್ರ ಕುಮಾರ್ – ಡಿಸಿಪಿ ಕಾನೂನು ಸುವ್ಯವಸ್ಥೆ, ಮಂಗಳೂರು ನಗರ
  34. ಎಂ.ಎನ್.ದೀಪನ್ – ಎಸ್‌ಪಿ, ಉತ್ತರ ಕನ್ನಡ
  35. ಎಸ್.ಜಾನವಿ – ಎಸ್‌ಪಿ, ವಿಜಯನಗರ
- Advertisement -

Related news

error: Content is protected !!