Monday, May 20, 2024
spot_imgspot_img
spot_imgspot_img

ಮಡಿಕೇರಿ: ನಗರ ಸಭೆ ಚುನಾವಣೆಯಲ್ಲಿ ನೆಲಕ್ಕಚ್ಚಿದ ಕಾಂಗ್ರೆಸ್!

- Advertisement -G L Acharya panikkar
- Advertisement -

ಮಡಿಕೇರಿ: ಮಡಿಕೇರಿ ನಗರ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲನುಭವಿಸಿದ್ದು, ನಗರ ಸಭೆ ಬಿಜೆಪಿಯ‌ ಪಾಲಾಗಿದೆ.

ಎಸ್ ಡಿಪಿಐ 5 ಸ್ಥಾನಗಳನ್ನು ಗೆಲ್ಲುವ ಮೂಲಕ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ. ಆದರೂ ನಗರ ಸಭೆಯ ಒಟ್ಟು 23 ಸ್ಥಾನಗಳ ಪೈಕಿ 16 ಸ್ಥಾನ ಗಳಿಸಿರುವ ಬಿಜೆಪಿ, ನಗರ ಸಭೆಯ ಅಧಿಕಾರವನ್ನು ತನ್ನ ಕೈ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಪ್ರಮುಖ ವಿರೋಧ ಪಕ್ಷವಾಗಿ ಎಸ್ ಡಿಪಿಐ ಕಾರ್ಯನಿರ್ವಹಿಸಲಿದೆ.

ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ 8, ಕಾಂಗ್ರೆಸ್ 10, ಜೆಡಿಎಸ್ 1, ಎಸ್ ಡಿಪಿಐ 4 ಸ್ಥಾನಗಳಲ್ಲಿ ಜಯಗಳಿಸಿತ್ತು. ಆದರೆ ಈ ಬಾರಿ ಕಾಂಗ್ರೆಸ್ ಗೆ ಕೇವಲ 1 ಸ್ಥಾನಗಳನ್ನು ಗಳಿಸಲಷ್ಟೇ ಸಾಧ್ಯವಾಗಿದೆ. ಎಸ್ ಡಿಪಿಐ ಒಟ್ಟು 9 ಸ್ಥಾನಗಳಲ್ಲಿ ಸ್ಪರ್ಧಿಸಿ 5 ಸ್ಥಾನ ಪಡೆದುಕೊಂಡಿದೆ. ಉಳಿದಂತೆ ಜೆಡಿಎಸ್ ಒಂದು ಸ್ಥಾನ ಪಡೆದು ಯಥಾಸ್ಥಿತಿ ಕಾಪಾಡಿಕೊಂಡಿದೆ.

- Advertisement -

Related news

error: Content is protected !!