Friday, May 10, 2024
spot_imgspot_img
spot_imgspot_img

ಸರಕಾರಿ ಪ್ರೌಢಶಾಲೆ ಮಾಣಿಲದಲ್ಲಿ ಮಹಾತ್ಮ ಗಾಂಧಿ, ಲಾಲ್‌ಬಹದ್ದೂರ್ ಶಾಸ್ತ್ರೀ ಜಯಂತಿ- ಶಾಲಾ ಸಭಾ ವೇದಿಕೆಯ ಉದ್ಘಾಟನಾ ಸಮಾರಂಭ- ಬೀಳ್ಕೊಡುಗೆ ಸಮಾರಂಭ

- Advertisement -G L Acharya panikkar
- Advertisement -

ಸರಕಾರಿ ಪ್ರೌಢಶಾಲೆ ಮಾಣಿಲದಲ್ಲಿ ಮಹಾತ್ಮ ಗಾಂಧಿ, ಲಾಲ್‌ಬಹದ್ದೂರ್ ಶಾಸ್ತ್ರೀ ಜಯಂತಿ, ಶಾಲಾ ಸಭಾ ವೇದಿಕೆಯ ಉದ್ಘಾಟನಾ ಸಮಾರಂಭ ಹಾಗೂ ಶಾಲಾ ಪ್ರಭಾರ ಮುಖ್ಯ ಶಿಕ್ಷಕರಾಗಿದ್ದ ಭುವನೇಶ್ವರ್ ಸಿ ಇವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.

ನೂತನವಾಗಿ ನವೀಕರಣಗೊಂಡ ಶಾಲಾ ಸಭಾ ವೇದಿಕೆಯನ್ನು ಶ್ರೀ ಕೃಷ್ಣ ಗುರೂಜಿ, ಧರ್ಮದರ್ಶಿ ಶ್ರೀ ಕ್ಷೇತ್ರ ಕುಕ್ಕಾಜೆ ಉದ್ಘಾಟಿಸಿದರು

ಶಾಲಾ ಸ್ಥಳ ದಾನಿ ಮಹಾಬಲ ಭಟ್ ಮುರುವ ನಡುಮನೆ ಇವರು ಲಾಲ್‌ಬಹದ್ದೂರ್ ಶಾಸ್ತ್ರೀ ಹಾಗೂ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು.

ಕಾರ್ಯಕ್ರಮದಲ್ಲಿ ಶ್ರೀಧರ ಬಾಳೆಕಲ್ಲು ಅಧ್ಯಕ್ಷರು ಗ್ರಾಮ ಪಂಚಾಯತ್ ಮಾಣಿಲ, ಅನಂತ ಭಟ್ ಮುಜೂರು ನಿವೃತ್ತ ಶಿಕ್ಷಕರು ಮಾಣಿಲ, ಖ್ಯಾತ ಯಕ್ಷಗಾನ ಕಲಾವಿದ ಹರೀಶ ಬಳಂತಿಮೊಗರು, ರಾಜೇಶ್ ಕುಮಾರ್ ಬಾಳೆಕಲ್ಲು, ಅಧ್ಯಕ್ಷರು ಸ್ವಾತಂತ್ರ್ಯ ಅಮೃತ ಮಹೋತ್ಸವ ಸಮಿತಿ, ಲತಾ ಯು ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ, ಭುವನೇಶ್ವರ್ ಸಿ. ನಿವೃತ್ತ ಶಾಲಾ ಪ್ರಭಾರ ಮುಖ್ಯ ಶಿಕ್ಷಕ ಇವರೆಲ್ಲರೂ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಾಲಾ ಪ್ರಭಾರ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ, ಇದೀಗ ಕರ್ತವ್ಯದ ಮೇರೆಗೆ ವರ್ಗಾವಣೆಗೊಳ್ಳುತ್ತಿರುವ ಭುವನೇಶ್ವರ್ ಸಿ ದಂಪತಿಯವರನ್ನು ಸನ್ಮಾನಿಸಿ ಅಭಿನಂದಿಸಿ ಬೀಳ್ಕೊಡುಗೆ ಸಮಾರಂಭ ನಡೆಸಲಾಯಿತು. ಬಳಿಕ ಭುವನೇಶ್ವರ್ ಸಿ ಇವರ ಬಗ್ಗೆ ಹಲವು ಗಣ್ಯರು, ಹಳೆವಿದ್ಯಾರ್ಥಿಗಳು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು, ಸಾರ್ವಜನಿಕರು ಅನಿಸಿಕೆ ಹಾಗೂ ಶುಭನುಡಿಗಳನ್ನಾಡಿದರು.

ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ಲತಾ ಯು ಸ್ವಾಗತಿಸಿ ಶಾಲಾ ಶಿಕ್ಷಕ ಸಂದೇಶ್ ಧನ್ಯವಾದವಿತ್ತರು. ವಿಷ್ಣು ಕನ್ನಡಗುಳಿ ಪ್ರಸ್ತಾವಿಕ ಮಾತನಾಡಿ, ಶಾಲಾ ಶಿಕ್ಷಕಿ ಕವಿತಾ ಅಭಿನಂದನಾ ಪತ್ರ ವಾಚಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಶಾಲಾ ಶಿಕ್ಷಕ ಉಮನಾಥ ರೈ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!