Tuesday, July 21, 2026
spot_imgspot_img
spot_imgspot_img

ವಿಟ್ಲ ಶ್ರೀ ಮಹತೋಬಾರ ಪಂಚಲಿಂಗೆಶ್ವರ ದೇವಸ್ಥಾನದ ಕಾಲಾವಧಿ ಜಾತ್ರೆಯ ಗೊನೆಮೂಹೂರ್ತ

- Advertisement -
- Advertisement -

ವಿಟ್ಲ: ಮಹತೋಬಾರ ಶ್ರೀ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಕಾಲಾವಧಿ ಜಾತ್ರೆಯು ಜ. 14 ರಿಂದ 22 ರ ವರೆಗೆ ನಡೆಯಲಿದ್ದು, ವರ್ಷಂಪ್ರತಿ ನಡೆಯುವ ಈ ಜಾತ್ರೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಾರೆ. ಕಾಲಾವಧಿ ಜಾತ್ರೆಯ ಗೊನೆ ಮುಹೂರ್ತ ಕಾರ್ಯಕ್ರಮವು ಇಂದು ನಡೆಯಿತು. ಬಸವನ ಗುಡಿ ರಾಮಣ್ಣ ಗೌಡ ರ ತೋಟದಿಂದ ಗೊನೆ ಮುಹೂರ್ತ ಮಾಡಿ, ಪಂಚಲಿಂಗೇಶ್ವರ ದೇವಸ್ಥಾನಕ್ಕೆ ತರಲಾಯಿತು. ಬಳಿಕ ದೇವಸ್ಥಾನದಲ್ಲಿ ಸಂಪ್ರದಾಯದಂತೆ ಧಾರ್ಮಿಕ ವಿಧಿವಿಧಾನಗಳು ನಡೆಯಿತು.

ಈ ಸಂದರ್ಭದಲ್ಲಿ ವಿಟ್ಲ ಅರಮನೆಯ ಸದಾಶಿವ ವಿ.ಆರ್, ಕೃಷ್ಣಯ್ಯ ಬಳ್ಳಾಲ್, ಜಯರಾಮ್ ಬಳ್ಳಾಲ್, ಶ್ರೀಕಂಠ ವರ್ಮ, ರವಿ ವರ್ಮ, ಅನಂತ ಪ್ರಸಾದ್,ಶಿವಣ್ಣ ಕಟ್ಟೆ, ಪದ್ಮನಾಭ ಗೌಡ ಮಂಜಲಾಡಿ, ಅಣ್ಣು ಗೌಡ ಮಂಜಲಾಡಿ, ಮುರಳಿ, ಮೋಹನ್ ಕಟ್ಟೆ, ಶಿವಪ್ರಸಾದ್, ನಂದನ್, ಮುರಳೀಧರ ರಾವ್ ಪಾಲ್ಗೊಂಡರು. ಜ.21 ಕ್ಕೆ ಶ್ರೀ ಪಂಚಲಿಂಗೇಶ್ವರ ದೇವರ ಮಹಾರಥೋತ್ಸವ ನಡೆಯಲಿದೆ.

- Advertisement -

Related news

error: Content is protected !!