- Advertisement -
- Advertisement -





ಮಲಪ್ಪುರಂ: ಅನಿರೀಕ್ಷಿತವಾಗಿ ಸುರಿದ ಸಿಡಿಲು ಸಹಿತ ಭಾರೀ ಮಳೆಗೆ ದುರಂತವೊಂದು ಸಂಭವಿಸಿದೆ. ವ್ಯೂ ಪಾಯಿಂಟ್‌ನಲ್ಲಿ ಸಿಡಿಲು ಬಡಿದು ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿ, ಮೂವರು ಗಾಯಗೊಂಡಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಮಂಕಡದಲ್ಲಿ ಮಂಗಳವಾರ(ಮೇ 12) ಸಂಜೆ ನಡೆದಿದೆ.
ಮಲ್ಲಪುರಂ ಮೂಲದರಹೀಸ್(20), ಫಹಾದ್ (19), ಬಹಾಸ್ (18) ಮತ್ತು ಜಿಯಾದ್(18) ಮೃತಪಟ್ಟವರು.7 ವಿದ್ಯಾರ್ಥಿಗಳ ಗುಂಪು ವ್ಯೂ ಪಾಯಿಂಟ್ ಗೆ ಹೋಗಿತ್ತು. ಈ ಪೈಕಿ ನಾಲ್ವರು ಸಾವನ್ನಪ್ಪಿದ್ದು, ಮೂವರಿಗೆ ಸುಟ್ಟ ಗಾಯಗಳಾಗಿವೆ ಗಾಯಳುಗಳನ್ನು ಮಂಜೇರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಡಿನ ಮಧ್ಯೆ ದುರ್ಗಮ ಪ್ರದೇಶವಾದ ಕಾರಣ ರಕ್ಷಣಾ ಕಾರ್ಯಾಚರಣೆಗೆ ಅಡೆತಡೆ ಉಂಟಾಯಿತು ಎಂದು ವರದಿ ಮೂಲಕ ತಿಳಿದು ಬಂದಿದೆ.
- Advertisement -








