Friday, March 29, 2024
spot_imgspot_img
spot_imgspot_img

ಸಮುದ್ರ ಸಾಹಸಕ್ಕೆ ಮಲ್ಪೆ ಬೀಚ್ ಅದ್ಭುತ ತಾಣ- “ವಿಂಚ್ ಪ್ಯಾರಾಸೈಲಿಂಗ್ ಬೋಟ್” ಶುಭಾರಂಭ

- Advertisement -G L Acharya panikkar
- Advertisement -

ಉಡುಪಿ(ನ.14): ಇಂದಿನಿಂದ ಪ್ರವಾಸಿಗರಿಗೆ ಮಲ್ಪೆ ಬೀಚ್ ನಲ್ಲಿ ರಸದೌತಣ. ಮಲ್ಪೆ ಬೀಚ್ ನಲ್ಲಿ ಪ್ರವಾಸಿಗರಿಗೆ ಇನ್ನು ಮುಂದೆ ಅದ್ಭುತ ಸಾಹಸದ ಅನುಭವ ಸಿಗಲಿದೆ. ಸಮುದ್ರದಲ್ಲಿ ಸಾಹಸ ಮಾಡಬೇಕೆನ್ನುವ ಹಂಬಲ ಇರುವವರಿಗೆ ಇದೀಗ ಸುವರ್ಣಾವಕಾಶ.

ಇಲ್ಲಿನ ‘ಬೀಚ್ ಅಡ್ವೆಂಚರ್ ವಾಟರ್ ಸ್ಪೋರ್ಟ್ಸ್’ ವತಿಯಿಂದ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಮಲ್ಪೆ ಬೀಚ್ ನಲ್ಲಿ ವಿಂಚ್ ಪ್ಯಾರಾಸೈಲಿಂಗ್ ಬೋಟ್ ಆರಂಭಗೊಳ್ಳಲಿದೆ.ಇದರ ಉದ್ಘಾಟನಾ ಸಮಾರಂಭವು ಮಲ್ಪೆ ಬೀಚ್ ನಲ್ಲಿ ಇಂದು ನ.14 ರಂದು ಸಂಜೆ 4 ಗಂಟೆಗೆ ನಡೆಯಲಿದೆ.

ಪ್ಯಾರಾಸೈಲಿಂಗ್ ಸಮುದ್ರದ ಮಧ್ಯೆ ಬೋಟ್ ನ ಮೇಲಿಂದಲೇ ಹಾರಾಟ ನಡೆಸಿ ಬೋಟ್ ನಲ್ಲೆ ಲ್ಯಾಂಡ್ ಆಗಬಹುದು. ಗೋವಾ, ಮಹಾರಾಷ್ಟ್ರ ,ಥೈಲ್ಯಾಂಡ್ ನಲ್ಲಿ ಈಗಾಗಲೇ ಜನಪ್ರಿಯಗೊಂಡಿದ್ದು. ವಿಂಚ್ ಪ್ಯಾರಾಸೈಲಿಂಗ್ ನಲ್ಲಿ ಪ್ರವಾಸಿಗರಿಗೆ ಬೋಟ್ ರೈಡಿಂಗ್ ಮತ್ತು ಹಾರಾಟ ಎರಡು ಒಂದರಲ್ಲೇ ಸಿಕ್ಕಿದಂತಾಗುತ್ತದೆ.

ಬೋಟ್ ನಲ್ಲಿ ಸುಮಾರು 15 ಮಂದಿಗೆ ಅವಕಾಶವಿದ್ದು 2 ಅಥವಾ 3 ಮಂದಿ ಮೇಲೆ ಹಾರಾಟ ನಡೆಸಬಹುದು. 350 ಅಶ್ವಶಕ್ತಿಯುಳ್ಳ ಬೋಟ್ ಹೈ ಸ್ಪೀಡ್ ನಲ್ಲಿ ಚಲಿಸಿ ಸುಮಾರು 100 ಮೀಟರ್ ಎತ್ತರದಲ್ಲಿ 90 ಡಿಗ್ರಿ ಮೇಲೆ ಕೊಂಡೊಯ್ಯುತ್ತದೆ. ಅರ್ಧ ನೀರಿನಲ್ಲೂ ಮುಳುಗಿಸುವಾಗ ಸಮುದ್ರದಲ್ಲಿ ಈಜುತ್ತಾ ಸಾಗುವ ಅನುಭವ ಸಿಗುತ್ತದೆ.

- Advertisement -

Related news

error: Content is protected !!