Sunday, June 14, 2026
spot_imgspot_img
spot_imgspot_img

ಕುಂಡಡ್ಕ : ಗುಣಶ್ರೀ‌ ವಿದ್ಯಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ; ವಿದ್ಯಾರ್ಥಿಗಳಿಂದ‌ ಆಕರ್ಷಕ ಪಥಸಂಚಲನ.

- Advertisement -
- Advertisement -

‌ಕುಂಡಡ್ಕ : ನಮ್ಮ ದೇಶವನ್ನು ದಾಸ್ಯದಿಂದ ಬಿಡುಗಡೆಗೊಳಿಸಲು ಅನೇಕ ನಾಯಕರು ಅವಿರತವಾಗಿ ಶ್ರಮಿಸಿದ್ದಾರೆ.ಸ್ವಾತಂತ್ರ್ಯವು ಅವರು ನೀಡಿದ ಅಮೂಲ್ಯ ಕೊಡುಗೆಯಾಗಿದೆ ಎಂದು ಗುಣಶ್ರೀ ವಿದ್ಯಾಲಯದ ಸಂಚಾಲಕ ವೇಣುಗೋಪಾಲ ಶೆಟ್ಟಿ ಮರುವಾಳ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.‌

ಮುಖ್ಯ ಗುರು ರಾಜಾರಾಮ ವರ್ಮ ವಿಟ್ಲ ಸ್ವಾಗತಿಸಿ ಶುಭ ಹಾರೈಸಿದರು. ವಿದ್ಯಾರ್ಥಿಗಳು ಶಾಲಾ ವಾದ್ಯವೃಂದದೊಂದಿಗೆ ಆಕರ್ಷಕ ಪಥಸಂಚಲನದ ಮೂಲಕ ಕುಂಡಡ್ಕ ಶೆಡ್ ಕಟ್ಟೆಗೆ ಆಗಮಿಸಿ ಸ್ವಾತಂತ್ರ್ಯದ ಮಹತ್ವ ಸಾರುವ ಗೀತೆಗಳು ಹಾಗೂ ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ನುಡಿ ನಮನಗಳನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ವಿಷ್ಣುಮೂರ್ತಿ ಯುವಕ ಮಂಡಲದ ಪದಾಧಿಕಾರಿಗಳು , ಇಡ್ಕಿದು ಸೇವಾ ಸಹಕಾರಿ ಸಂಘದ ಪ್ರತಿನಿಧಿಗಳು, ವಿಷ್ಣು ಸಂಘದ ಸದಸ್ಯರು,ಉದ್ಯಮಿ ಸಿದ್ಧಿಕ್ , ಪೋಷಕರು ಮತ್ತು ಶಿಕ್ಷಕಿಯರು ಪಾಲ್ಗೊಂಡಿದ್ದರು

- Advertisement -

Related news

error: Content is protected !!