Monday, June 8, 2026
spot_imgspot_img
spot_imgspot_img

ಮಲ್ಪೆ: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ..!

- Advertisement -
- Advertisement -

ಮಲ್ಪೆ: ನಾಪತ್ತೆಯಾಗಿದ್ದ ವ್ಯಕ್ತಿಯೋರ್ವರ ಮೃತದೇಹ ಪಡುಕೆರೆ ಮಟ್ಟು ಸಮೀಪದ ಪಾಪನಾಶಿನಿ ನದಿಯಲ್ಲಿ ಪತ್ತೆಯಾಗಿದೆ.

ಮೃತಪಟ್ಟ ವ್ಯಕ್ತಿಯನ್ನು ಮಲ್ಪೆ ಬಾಪುತೋಟದ ನಿವಾಸಿ ಜಲೀಲ್ (49) ಎಂದು ಗುರುತಿಸಲಾಗಿದೆ.

ಜಲೀಲ್‌ ಅವರು ಶನಿವಾರ ಬೆಳಗ್ಗೆ 5 ಗಂಟೆಗೆ ಮನೆಯಿಂದ ನಾಪತ್ತೆಯಾಗಿದ್ದರು. ಅವರ ಬೈಕ್, ಮೊಬೈಲ್ ಹಾಗೂ ಚಪ್ಪಲಿ ಮಲ್ಪೆ ಪಡುಕರೆ ಸೇತುವೆ ಬಳಿ ಪತ್ತೆಯಾಗಿತ್ತು. ಸ್ಥಳೀಯ ಮೀನುಗಾರರು ಮೃತದೇಹದ ಹುಡುಕಾಟಕ್ಕೆ ಈಶ್ವರ್ ಮಲ್ಪೆ ಮತ್ತು ತಂಡದ ಜೊತೆಗೆ ಸಹಕಾರ ನೀಡಿದ್ದರು.

ಈಶ್ವ‌ರ್ ಮಲ್ಪೆ ಮತ್ತು ತಂಡ ತಮ್ಮ ಆಂಬುಲೆನ್ಸ್ ಮೂಲಕ ಮೃತದೇಹವನ್ನು ಉಡುಪಿ ಜಿಲ್ಲಾಸ್ಪತ್ರೆಗೆ ಸಾಗಿಸಿದರು.

- Advertisement -

Related news

error: Content is protected !!