Wednesday, April 24, 2024
spot_imgspot_img
spot_imgspot_img

ಮತ್ತೆ ಗೆದ್ದು ಬೀಗಿದ ದೀದಿ: ಗೆಲುವಿನ ಅಂತರವೆಷ್ಟು ಗೊತ್ತಾ?

- Advertisement -G L Acharya panikkar
- Advertisement -

ನಂದಿಗ್ರಾಮ್: ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅಂತೂ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ವಿರುದ್ಧ ಪ್ರಯಾಸದ ಗೆಲುವು ಕಂಡಿದ್ದಾರೆ.

ಕೇವಲ 1200 ಮತಗಳ ಅಂತರದಿ0ದ ದೀದಿ ಗೆಲುವು ದಾಖಲಿಸುವ ಮೂಲಕ ತಾವು ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಲು ಹಾದಿ ಸುಗಮ ಮಾಡಿಕೊಂಡಿದ್ದಾರೆ.

ಮತ ಎಣಿಕೆಯ ಆರಂಭದಿ0ದಲೂ ಸುವೇಂದು ಅಧಿಕಾರಿ ಹಾಗೂ ಮಮತಾ ಬ್ಯಾನರ್ಜಿ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿತ್ತು. ವಿಜಯ ಮಾಲೆ ತೂಗೂಯ್ಯಾಲೆಯಲ್ಲಿತ್ತು. ಒಮ್ಮೆ ಸುವೇಂದು ಮುನ್ನಡೆ ದಾಖಲಿಸಿದರೇ ಮತ್ತೊಮ್ಮೆ ಮಮತಾ ಮುನ್ನಡೆ ದಾಖಲಿಸುತ್ತಿದ್ದರು. ಅಂತಿಮ ಸುತ್ತಿನ ಮತ ಎಣಿಕೆ ಪೂರ್ಣಗೊಂಡಾಗ ಮಮತಾ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

- Advertisement -

Related news

error: Content is protected !!