Monday, April 29, 2024
spot_imgspot_img
spot_imgspot_img

ಕಸ ಬಿಸಾಕಿದವರನ್ನು ಹೆಕ್ಕಲು ಹೇಳಿದ ವೈದ್ಯಾಧಿಕಾರಿ; ಸ್ಥಳದಲ್ಲಿ ವಾಗ್ವಾದ ನಡೆಸಿದ ಯುವಕ ಕೊನೆಗೂ ಪೊಲೀಸ್ ಠಾಣೆಯಲ್ಲಿ ದಂಡ ಕಟ್ಟಿಸಿಕೊಂಡ!!

- Advertisement -G L Acharya panikkar
- Advertisement -

ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರಿನಿಂದ ಕಸ ಹೊರಕ್ಕೆ ಬಿಸಾಡಿದನ್ನು ಕಂಡ ಪ್ರತ್ಯಕ್ಷದರ್ಶಿಯೊಬ್ಬರು ಕಾರನ್ನು ತಡೆದು ಕಸಹೆಕ್ಕುವಂತೆ ಹೇಳಿದ ಕಾರಣಕ್ಕೆ ವಾಹನ ಸವಾರರ ನಡುವೆ ವಾಗ್ವಾದ ನಡೆದು ಪೊಲೀಸರು ದಂಡ ವಿಧಿಸಿದ ಘಟನೆ ಪುತ್ತೂರಿನ ದರ್ಬೆಯಲ್ಲಿ ನಡೆದಿದೆ.

ಸಂಜೆ ಹೊತ್ತಿನಲ್ಲಿ ಪುತ್ತೂರಿನ ವೈದ್ಯರೊಬ್ಬರು ದ್ವಿಚಕ್ರವಾಹನದಲ್ಲಿ ರಸ್ತೆಯಲ್ಲಿ ಸಂಚರಿಸುತ್ತಿರುವಾಗ ಎದುರಿನಿಂದ ಸಾಗುತ್ತಿದ್ದ ಡಸ್ಟರ್ ಕಾರಿನಿಂದ ಕಸ ಹೊರಗೆ ಬಿಸಾಡಿದನ್ನು ನೋಡಿ ಕಾರನ್ನು ನಿಲ್ಲಿಸಿ ಬಿಸಾಡಿದ ಕಸವನ್ನು ಹೆಕ್ಕುವಂತೆ ಕೇಳಿಕೊಂಡಾಗ ಕಾರು ಚಾಲಕ ವೈದ್ಯಾಧಿಕಾರಿ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಅಲ್ಲಿದ್ದ ಬೇರೆ ಕಸ ನೀವು ಹೆಕ್ಕಿದರೆ ನಾನು ಈ ಕಸ ಹೆಕ್ಕುತ್ತೇನೆಂದು ಕಾರು ಚಾಲಕ ವೈದ್ಯಾಧಿಕಾರಿಯ ಜೊತೆ ಮಾತಿಗೆ ಮಾತು ಬೆಳೆಸಿದ್ದು, ಪರಸ್ಟರ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

ಆ ಕೂಡಲೇ ವೈದ್ಯಾಧಿಕಾರಿ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ತಕ್ಷಣ ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರಿಗೆ ಘಟನೆಯ ವಿವರ ತಿಳಿದಾಗ ಆ ವಾಹನವನ್ನು ಸಂಪ್ಯದಲ್ಲಿ ತಡೆದಿದ್ದಾರೆ. ಕಸವನ್ನು ಬಿಸಾಡಿದ ಪ್ರಕರಣದ ವಿರುದ್ದ ದಂಡ ವಿಧಿಸಲಾಗಿದೆ.

- Advertisement -

Related news

error: Content is protected !!