Wednesday, June 24, 2026
spot_imgspot_img
spot_imgspot_img

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ..!

- Advertisement -
- Advertisement -

ಜೀವನದಲ್ಲಿ ಜಿಗುಪ್ಸೆಗೊಂಡು ಸದಸ್ಯ ಹಾಗೂ ರೈತ ವಿಷ ಸೇವಿಸಿ ‌ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಳೂಂಡಗಿಯಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಮಲ್ಲಪ್ಪ‌ ಹೋರಿ (48) ಎಂದು ಗುರುತಿಸಲಾಗಿದೆ.

ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದ ಮಲ್ಲಪ್ಪ‌ ಹೋರಿ, ಮಕ್ಕಳ‌ ಮದುವೆಗೆ ಹಾಗೂ ಮಳೆ ಬಾರದೆ ಬೆಳೆ ನಷ್ಟದಿಂದಾಗಿ 25 ಲಕ್ಷಕ್ಕೂ ಅಧಿಕ ಹಣ ಸಾಲ‌ ತೆಗೆದುಕೊಂಡಿದ್ದನು, ಸಾಲಗಾರರು ಸಾಲ ವಾಪಸ್‌ ನೀಡುವಂತೆ ಪದೇಪದೇ ಕೇಳುತ್ತಿದ್ದ ಹಿನ್ನಲೆಯಲ್ಲಿ ಸಾಲ ಮರುಪಾವತಿ ಮಾಡಲಾಗದೆ ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಅಫಜಲಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!