Tuesday, September 22, 2026
spot_imgspot_img
spot_imgspot_img

ಹಳೆ ವೈಷಮ್ಯದಿಂದ ಮಾರಕಾಸ್ತ್ರಗಳಿಂದ ಕಡಿದು ವ್ಯಕ್ತಿಯ ಕೊಲೆ

- Advertisement -
- Advertisement -

ಕಲಬುರಗಿ: ಹಳೆ ವೈಷಮ್ಯದಿಂದ ವ್ಯಕ್ತಿಯೋರ್ವರನ್ನು ಮಾರಕಾಸ್ತ್ರಗಳಿಂದ ಕಡಿದು ಕೊಲೆ ಮಾಡಿರುವ ಘಟನೆ ಕಮಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಮಲಾಪುರ ಪಟ್ಟಣದ ನಿವಾಸಿ ಮುಹಮ್ಮದ್ ಹನೀಫ್ (65) ಕೊಲೆಯಾದವರು. ಅದೇ ಗ್ರಾಮದ ರಿಝಾನ್(25) ಎಂಬಾತ ಕೊಲೆ ಕೃತ್ಯ ನಡೆಸಿರುವುದಾಗಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆ ರಿಝಾನ್ ಹಾಗೂ ಮೃತ ಹನೀಫ್ ನಡುವೆ ಜಗಳವಾಗಿತ್ತು. ಇದೇ ಕಾರಣಕ್ಕೆ ಹಳೆ ವೈಷಮ್ಯ ಇಟ್ಟುಕೊಂಡು ಕಮಲಾಪುರದ ಜೇವಣಗಿ ರಸ್ತೆಯ ಕೆಇಬಿ ಕಚೇರಿ ಬಳಿ ಹನೀಫ್ ಅವರನ್ನು ರಿಝಾನ್ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅದ್ದೂರು ಶ್ರೀನಿವಾಸಲು, ಸ್ಥಳೀಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!