Friday, May 17, 2024
spot_imgspot_img
spot_imgspot_img

ರಸ್ತೆಯಲ್ಲೇ ಬುರ್ಖಾದಾರಿ ಮಹಿಳೆಯ ಮುಂದೆ ಬಟ್ಟೆ ಬಿಚ್ಚಿ ಖಾಸಗಿ ಅಂಗ ಪ್ರದರ್ಶಿಸಿದ ವ್ಯಕ್ತಿ

- Advertisement -G L Acharya panikkar
- Advertisement -

ಬೈಕ್‌ನಲ್ಲಿ ಬಂದ ವ್ಯಕ್ತಿ ಯಾರೂ ಇಲ್ಲದ್ದನ್ನ ನೋಡಿ, ತನ್ನ ಉಡುಪನ್ನ ತೆಗೆದು ಮಹಿಳೆಯ ಮುಂದೆ ವಿಕೃತಿ ಮೆರೆದ ಘಟನೆ ನಡೆದಿದೆ. ಪಾಕಿಸ್ತಾನದ ಕರಾಚಿಯ ಗುಲಿಸ್ತಾನ್-ಇ-ಚೌಹರ್‌ನಲ್ಲಿ ಈ ನಡೆದ ಘಟನೆ.

ವ್ಯಕ್ತಿಯ ವಿಕೃತಿ ಮೆರೆದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯದಲ್ಲಿ ಗಮನಿಸೋ ಹಾಗೆ, ಬೈಕ್‌ನಲ್ಲಿ ಬಂದ ವ್ಯಕ್ತಿ ಯಾರೂ ಇಲ್ಲದ್ದನ್ನ ನೋಡಿ, ರಸ್ತೆಯಲ್ಲೇ ತನ್ನ ಉಡುಪನ್ನ ತೆಗೆಯುತ್ತಾನೆ.

ಕೆಲ ಸೆಕೆಂಡ್ ನಂತರ, ಅದೇ ದಾರಿಯಲ್ಲಿ ಬುರ್ಖಾ ಧರಿಸಿದ ಯುವತಿಯೊಬ್ಬಳು ಬರುತ್ತಾಳೆ. ಆಕೆಯನ್ನ ನೋಡಿದಾಕ್ಷಣ ಆಕೆಗೆ ತನ್ನ ಖಾಸಗಿ ಅಂಗ ತೋರಿಸುತ್ತಾ ಆಕೆಯ ಮೇಲೆ ಲೈಂಗಿಕ ಹಲ್ಲೆ ಮಾಡಲು ಯತ್ನಿಸುತ್ತಾನೆ. ಅಸಲಿಗೆ ಆತನ ದುರುದ್ದೇಶ ಅತ್ಯಾಚಾರ ಮಾಡುವುದಾಗಿತ್ತು ಎಂದು ಹೇಳಲಾಗಿದೆ.

https://twitter.com/TOKCityOfLights/status/1676259468240121856

ತನ್ನ ಮೇಲೆ ಕೌರ್ಯ ನಡೆಯುತ್ತಿದೆ ಅನ್ನೊದನ್ನ ಅರಿತ ಮಹಿಳೆ ಜೋರಾಗಿ ಕೂಗಿದ್ದಾಳೆ. ಅದನ್ನು ನಿರೀಕ್ಷೆ ಮಾಡದ ಆತ, ಆಕೆಯನ್ನ ಬಿಟ್ಟು ಮತ್ತೆ ಬಂದು ಒಳ ಉಡುಪು ಧರಿಸಿ, ಬೈಕ್ ಹತ್ತಿ ಎಸ್ಕೇಪ್ ಆಗಿದ್ದಾನೆ.

ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಕಾಳ್ಗಿಚ್ಚಿನಂತೆ ಹರಡಿದೆ. ಅಲ್ಲಿನ ಮುಖ್ಯಮಂತ್ರಿ ಸೈಯದ್ ಮುರಾದ್ ಅಲಿ ಶಾ ಕೂಡ ಇದು ‘ನಾಚಿಕೆಗೇಡಿನ ಕೃತ್ಯ’ ಎಂದು ಹೇಳಿದ್ದಾರೆ. ಅಲ್ಲದೇ ತಕ್ಷಣವೇ ಆ ವ್ಯಕ್ತಿಯನ್ನ ಬಂಧಿಸಲು ಆದೇಶಿಸಿದ್ದಾರೆ.

- Advertisement -

Related news

error: Content is protected !!