Wednesday, May 1, 2024
spot_imgspot_img
spot_imgspot_img

ಮಂಗಳೂರು: 13 ಮಕ್ಕಳಿಗೆ, 17 ಶಿಕ್ಷಕರಿಗೆ ಕೋವಿಡ್ ದೃಢ!

- Advertisement -G L Acharya panikkar
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಗ್ರಾಮೀಣ ಪ್ರದೇಶಗಳಿಂತ ಹೆಚ್ಚಾಗಿ ಮಂಗಳೂರು ನಗರದಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಸೋಮವಾರ ಬಿಜೈ ಕಾಪಿಕ್ಕಾಡಿನ ಟ್ಯೂಷನ್ ಸಂಸ್ಥೆಯೊಂದರ 13 ಮಕ್ಕಳಿಗೆ ಕೋವಿಡ್ -19 ದೃಢಪಟ್ಟಿದೆ.

ನಗರದ ಶಿಕ್ಷಣ ಸಂಸ್ಥೆಯೊಂದರಲ್ಲಿ ಒಬ್ಬರಿಗೆ ಕೋವಿಡ್ ದೃಢಪಟ್ಟಿತ್ತು. ಆಗ ಶಿಕ್ಷಣ ಸಂಸ್ಥೆಯ 90 ಜನರ ಗಂಟಲು ದ್ರವ ಸಂಗ್ರಹಿಸಿ, ಪರೀಕ್ಷೆ ನಡೆಸಿದಾಗ, 17 ಜನರಿಗೆ ಕೋವಿಡ್ ಇರುವುದು ಪತ್ತೆಯಾಗಿದೆ’ ಎಂದು ತಿಳಿದು ಬಂದಿದೆ.

ಇದನ್ನು ಉದ್ಧೇಶಿಸಿ ಮಾತಾನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್‌ಕುಮಾರ್; ಆರೋಗ್ಯ ಇಲಾಖೆಯಷ್ಟೇ ಜವಾಬ್ದಾರಿ ಸಾರ್ವಜನಿಕರಿಗೂ ಇದೆ. ಉದ್ಯೋಗಿಗಳು, ಅನಿವಾರ್ಯತೆ ಇದ್ದವರು ಮಾತ್ರ ಮನೆಯಿಂದ ಹೊರಬರಬೇಕು. ಉಳಿದವರು ಸಾಧ್ಯವಾದಷ್ಟು ಮನೆಯಲ್ಲೇ ಇರಬೇಕು. ಹೊರಗೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪಾಸಿಟಿವ್ ಬಂದವರ ಪ್ರಾಥಮಿಕ ಸಂಪರ್ಕಿತರು, ಐಸೊಲೇಷನ್ ಆದರೆ ಸಹಜವಾಗಿ ವೈರಸ್‌ನ ಕೊಂಡಿ ಕಳಚುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಪ್ರಕರಣ ಹೆಚ್ಚುವ ಸಾಧ್ಯತೆ’ ‘ವೈರಸ್ ಸ್ವರೂಪ ಬದಲಾಗಿರುವ ಕಾರಣ, ವೇಗವಾಗಿ ಹರಡುತ್ತಿದೆ. ಎಂದಿನAತೆ ಇರುವ ಜನಸಂಚಾರ, ಶಾಲೆ-ಕಾಲೇಜುಗಳು ತೆರೆದಿರುವ ಕಾರಣಕ್ಕೆ ಇನ್ನು ಎರಡು ವಾರಗಳಲ್ಲಿ ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚುವ ಸಾಧ್ಯತೆಗಳಿವೆ. ಸಾರ್ವಜನಿಕರು ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್‌ಕುಮಾರ್ ತಿಳಿಸಿದರು.

1881 ಸಕ್ರಿಯ ಪ್ರಕರಣ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ 218 ಜನರಿಗೆ ಕೋವಿಡ್ ದೃಢಪಟ್ಟಿದೆ. 101 ಜನರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1,881 ಸಕ್ರಿಯ ಪ್ರಕರಣಗಳು ಇವೆ. ಈವರೆಗೆ 6,89,794 ಜನರ ಗಂಟಲು ದ್ರವ ತಪಾಸಣೆ ಮಾಡಲಾಗಿದ್ದು, ಅವರಲ್ಲಿ 38,361 ಜನರಿಗೆ ಕೋವಿಡ್ ತಗುಲಿತ್ತು. ನೆರೆಯ ಕಾಸರಗೋಡು ಜಿಲ್ಲೆಯಲ್ಲಿ 676 ಜನರಿಗೆ ಕೋವಿಡ್ ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟು 4,649 ಸಕ್ರಿಯ ಪ್ರಕರಣಗಳು ಇವೆ.

driving
- Advertisement -

Related news

error: Content is protected !!