Thursday, April 18, 2024
spot_imgspot_img
spot_imgspot_img

ವಿಟ್ಲ: ಇಕೋ ಬ್ಲಿಸ್ ಸಂಸ್ಥೆಯಿಂದ ಪೊಲೀಸ್ ಸಿಬ್ಬಂದಿಗಳಿಗೆ 16 ಸಾವಿರ ಊಟದ ತಟ್ಟೆ ಹಸ್ತಾಂತರ

- Advertisement -G L Acharya panikkar
- Advertisement -

ವಿಟ್ಲ: ಕೋವಿಡ್ ಸಂದರ್ಭದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಂಗಳೂರು ನಗರ ಪೊಲೀಸ್ ಸಿಬ್ಬಂದಿ ವರ್ಗದವರಿಗೆ ಊಟೋಪಚಾರದ ವ್ಯವಸ್ಥೆಗಾಗಿ ಒಂದು ವ್ಯಾನ್ ನಷ್ಟು ಸುಮಾರು ಹದಿನಾರು ಸಾವಿರ ಹಾಳೆ ತಟ್ಟೆಗಳನ್ನು ಎ. ಎಸ್. ಐ. ನಾರಾಯಣ್ ಇವರ ಮುಖಾಂತರ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರಿಗೆ ಇಂದು ಇಕೋ ಬ್ಲಿಸ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಆದ ರಾಜಾರಾಮ್. ಸಿ.ಜಿ ಅವರು ಹಸ್ತಾಂತರಿಸಿದರು.

ಈ ಸಮಯದಲ್ಲಿ ಇಕೋ ಬ್ಲಿಸ್ ಡೈರೆಕ್ಟರ್ ಹಾಗೂ ವಿಟ್ಲ ಪಡನೂರು ಪಂಚಾಯತ್ ಅಧ್ಯಕ್ಷರಾದ ರೇಷ್ಮಾ ರಾಜಾರಾಮ್, ಇಕೋ ಬ್ಲಿಸ್ ಡೈರೆಕ್ಟರ್ ಆದ ರಮೇಶ್ಚಂದ್ರ. ಸಿ. ಜಿ , ಪೊಲೀಸ್ ಸಿಬ್ಬಂದಿವರ್ಗ ಹಾಗು ಇತರರು ಹಾಜರಿದ್ದರು.

ವಿಟ್ಲ ಕೊಡಂಗಾಯಿಯ ಬಲಿಪಗುಳಿ ಎಂಬಲ್ಲಿ ಉತ್ಪಾದನ ಘಟಕ ಕಾರ್ಯನಿರ್ವಹಿಸುತ್ತಿದೆ. ಇಕೋ ಬ್ಲಿಸ್ ಕಂಪೆನಿ ಹಲವಾರು ವರ್ಷಗಳಿಂದ ಅತ್ಯುತ್ತಮ ಗುಣಮಟ್ಟದ ಹಾಳೆ ತಟ್ಟೆಗಳನ್ನು ತಯಾರಿಸಿಕೊಂಡು ಬರುತ್ತಿದೆ. ದೇಶ ವಿದೇಶಗಳಲ್ಲಿ ಈ ತಟ್ಟೆಗೆ ಬೇಡಿಕೆ ಇದೆ. ಕರಾವಳಿಯ ಭಾಗದ ಹೆಮ್ಮೆಯಾಗಿ ಈ ಸಂಸ್ಥೆ ಗುರುತಿಸಿಕೊಂಡಿದೆ.

- Advertisement -

Related news

error: Content is protected !!