Saturday, July 25, 2026
spot_imgspot_img
spot_imgspot_img

ಮಂಗಳೂರು: ನಕಲಿ ಕ್ರೀಡಾ ಪರಿಕರ ಮಾರಾಟ ಅಂಗಡಿಗಳಿಗೆ ಪೊಲೀಸರ ದಾಳಿ, ವಸ್ತುಗಳು ವಶ

- Advertisement -
- Advertisement -

ಮಂಗಳೂರು: ನಕಲಿ ಕ್ರೀಡಾ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ಮಾಡಿದ ಪೊಲೀಸರು ಕ್ರೀಡಾ ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ.

ನಕಲಿ ಕ್ರೀಡಾ ಸಾಮಗ್ರಿಗಳು ಮಾರಟವಾಗುತ್ತಿರುವ ಬಗ್ಗೆ ಬ್ರಾಂಡ್ ಪ್ರೊಟೆಕ್ಟರ್ಸ್‌ ಇಂಡಿಯಾ ಪ್ರೈ. ಲಿ. ನ ದಕ್ಷಿಣ ಭಾರತದ ಪ್ರಾದೇಶಿಕ ಮುಖ್ಯಸ್ಥರಾದ ಸ್ಟೀಫನ್ ರಾಜ್ ಅವರು ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಆ. 18 ಮತ್ತು 19 ರಂದು ಸ್ಪೋರ್ಟ್ಸ್ ವಿನ್ನರ್ ಅಂಗಡಿ, ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಮಹಾದೇವ ಸ್ಪೋರ್ಟ್ಸ್ ಸೆಂಟರ್‌ಗಳಲ್ಲಿ ಕಾಸ್ಕೋ, ನಿವಿಯಾ, ಯೊನೆಕ್ಸ್ ಬ್ರಾಂಡ್ ಹೆಸರಿನಲ್ಲಿ ನಕಲಿ ಫುಟ್ಬಾಲ್‌ಗಳು, ವಾಲಿಬಾಲ್‌ಗಳು, ಬ್ಯಾಡಾಮಿಂಟನ್ ರೆಕೇಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ.ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ತನಿಖೆ ಮುಂದುವರಿದಿದೆ.

- Advertisement -

Related news

error: Content is protected !!