Monday, April 29, 2024
spot_imgspot_img
spot_imgspot_img

ಮಂಗಳೂರು: ಬಸ್ಸಿನಲ್ಲಿ ಮಹಿಳೆಯ ಚಿನ್ನಾಭರಣವಿದ್ದ ವ್ಯಾನಿಟಿ ಬ್ಯಾಗ್‌ ಕಳವು

- Advertisement -G L Acharya panikkar
- Advertisement -
vtv vitla

ಮಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಪರ್ಸ್ ಕಳವಾದ ಘಟನೆ ಶನಿವಾರ ನಡೆದಿದೆ. ರಂಜಿನಿ ಮಾರ್ಲ ಪರ್ಸ್ ಕಳೆದುಕೊಂಡವರು.

ಶನಿವಾರ ಕೆಎಸ್ಸಾರ್ಟಿಸಿ ಬಸ್‌ನಲ್ಲಿ ತುಂಬೆಯಿಂದ ಮಂಗಳೂರು ನಗರದ ಸರ್ವೀಸ್ ಬಸ್ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದಾಗ ಬೆಳಗ್ಗೆ 8.45ರಿಂದ 9.20ರ ನಡುವೆ ಅವರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಸಣ್ಣ ಪರ್ಸ್ ಕಳವಾಗಿದೆ. ಪರ್ಸ್‌ನಲ್ಲಿ ಸುಮಾರು 55 ಗ್ರಾಂ ತೂಕದ ಚಿನ್ನಾಭರಣ, 1 ಪೆನ್‌ಡ್ರೈವ್, 5,000 ರೂ. ನಗದು ಸೇರಿದಂತೆ ಅಂದಾಜು 3,05,500 ರೂ. ಮೌಲ್ಯದ ಸೊತ್ತುಗಳಿದ್ದವು ಎಂಬುದಾಗಿ ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಾರಿಗಾದರು ಸಿಕ್ಕಿದ್ದಲ್ಲಿ ಈ ಕೆಳಗಿನ ನಂಬರ್‌ಗೆ ಮಾಹಿತಿ ನೀಡಬೇಕಾಗಿ ತಿಳಿಸಿದ್ದಾರೆ.

+91 94495 04843
+91 98450 72793

- Advertisement -

Related news

error: Content is protected !!