Thursday, April 18, 2024
spot_imgspot_img
spot_imgspot_img

ಇಂದಿನಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆ ಹೊಣೆ ಅದಾನಿ ಗ್ರೂಪ್ ಗೆ

- Advertisement -G L Acharya panikkar
- Advertisement -

ಮಂಗಳೂರು ಅ31: ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯ ಹೊಣೆಯನ್ನು ಇಂದಿನಿಂದ ಅದಾನಿ ಗ್ರೂಪ್ ನಡೆಸಲಿದೆ.

ಈವರೆಗೆ ಈ ವಿಮಾನ ನಿಲ್ದಾಣದ ನಿರ್ವಹಣೆಯ ಜವಾಬ್ದಾರಿಯನ್ನು ಭಾರತೀಯ ವಿಮಾನ‌ ನಿಲ್ದಾಣ ಪ್ರಾಧಿಕಾರವೇ ಮಾಡುತ್ತಿತ್ತು. ಆದರೆ ಕೇಂದ್ರ ಸರ್ಕಾರ ದೇಶದ ಕೆಲವು ವಿಮಾನ ನಿಲ್ದಾಣಗಳ ನಿರ್ವಹಣೆ ಕೆಲಸವನ್ನು ಖಾಸಗಿ ಸಂಸ್ಥೆಗಳಿಗೆ ನೀಡಿದ್ದು, ಅದರಂತೆ ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿ ಗ್ರೂಪ್​​ಗೆ ವಹಿಸಿದೆ.

ಮಂಗಳೂರು ವಿಮಾನ ನಿಲ್ದಾಣ ನಿರ್ವಹಣೆ ಜವಾಬ್ದಾರಿ ಹೊತ್ತುಕೊಂಡ ಅದಾನಿ ಗ್ರೂಪ್ ಇಂದಿನಿಂದ ಕಾರ್ಯಾರಂಭಿಸಿದೆ.ಮಂಗಳೂರು ಏರ್ಪೋರ್ಟ್‌ನ‌ ಕಸ್ಟಮ್ಸ್, ವಲಸೆ ಹಾಗೂ ಭದ್ರತಾ ವ್ಯವಸ್ಥೆಯ ವ್ಯವಹಾರ, ಸಂಪರ್ಕ ಮತ್ತು ವಿಚಕ್ಷಣ ವ್ಯವಸ್ಥೆ, ಏರ್ ಟ್ರಾಫಿಕ್ ಮ್ಯಾನೇಜ್ ಮೆಂಟ್ ಕಾರ್ಯಗಳನ್ನು ಇದೇ ಸಂಸ್ಥೆ ನಡೆಸಲಿದೆ.

- Advertisement -

Related news

error: Content is protected !!