Saturday, June 6, 2026
spot_imgspot_img
spot_imgspot_img

ಮಂಗಳೂರು: ಕೆಎಸ್ಆರ್.ಟಿಸಿ ಬಸ್ ಚಾಲಕನಿಗೆ ಅವಾಚ್ಯವಾಗಿ ನಿಂದಿಸಿ, ಕೊಲೆಯತ್ನ – ಆರೋಪಿ ಸೊಹೀಫ್ ಬಂಧನ

- Advertisement -
- Advertisement -

ಮಂಗಳೂರು: ಕೆಎಸ್ಆರ್.ಟಿಸಿ ಬಸ್ಸು ಚಾಲಕನಿಗೆ ವಾಹನ ಸವಾರನೊಬ್ಬ ಅವಾಚ್ಯವಾಗಿ ಬೈದು ಕೊಲೆಯತ್ನ ಮಾಡಿರುವ ಘಟನೆ ಮಂಗಳೂರಿನ ಕಣ್ಣೂರು ಬಳಿ ನಡೆದಿದೆ.

ಪುತ್ತೂರು ಡಿಪ್ಪೋದ ಕೆಎಸ್ಆರ್.ಟಿಸಿ ಬಸ್ಸು ಚಾಲಕರಾದ ರಾಜು ಗಜಕೋಶ ಎಂಬವರು ಮಾ.5 ರಂದು ಪುತ್ತೂರಿನಿಂದ ಮಂಗಳೂರು ಸ್ಟೇಟ್ ಬ್ಯಾಂಕ್ ಕಡೆಗೆ ಕೆಎಸ್ಆರ್.ಟಿಸಿ ಬಸ್ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಕಣ್ಣೂರು ಸಮೀಪ ಡಿಯೋ ಸ್ಕೂಟರ್ ಸವಾರನು ಸ್ಕೂಟರ್ ನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಪಡೀಲ್ ರೈಲ್ವೆ ಒವರ್ ಬ್ರಿಡ್ಜ್ ಬಳಿ ತಲುಪಿದಾಗ ಕೆಎಸ್ಆರ್.ಟಿಸಿ ಬಸ್ಸಿಗೆ ಡಿಯೋ ಸ್ಕೂಟರ್ ನ್ನು ಅಡ್ಡಲಾಗಿ ನಿಲ್ಲಿಸಿ,

ಸ್ಕೂಟರ್ ನಿಂದ ಇಳಿದು ಚಾಲಕನ ಬಳಿ ಬಂದು ಡೋರ್ ಎಳೆದು ಭಾರಿ ರಾಶ್ ಆಗಿ ಬರುತ್ತೀಯ ಎಂದು ಬೈದು ನಂತರ ಆರೋಪಿ ಆತನ ಸ್ಕೂಟರ್ ನಿಂದ ಉದ್ದನೆಯ ಚಾಕು ತಂದು ಚಾಲಕನಿಗೆ ತಿವಿಯುವ ವೇಳೆ ಚಾಲಕ ಹಿಂದಕ್ಕೆ ಸರಿದು ತಪ್ಪಿಸಿಕೊಂಡಿರುತ್ತಾರೆ.

ಆರೋಪಿಯ ವಿರುದ್ಧ ಕಂಕನಾಡಿ ನಗರ ಠಾಣೆಯಲ್ಲಿ ಚಾಲಕ ರಾಜು ಗಜಕೋಶ ರವರು ಅವಾಚ್ಯವಾಗಿ ಬೈದು ಕೊಲೆಯತ್ನ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ದೂರನ್ನು ದಾಖಲಿಸಿರುತ್ತಾರೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿರುತ್ತಾರೆ. ಆರೋಪಿಯನ್ನು ಸೊಹೀಫ್ (19) ಎಂದು ಗುರುತಿಸಲಾಗಿದೆ.

- Advertisement -

Related news

error: Content is protected !!