Wednesday, June 24, 2026
spot_imgspot_img
spot_imgspot_img

ಮಂಗಳೂರು: ಖಾಸಗಿ ಬಸ್ಸೊಂದು ಸ್ಕೂಟರ್ ಸವಾರನ ಮೇಲೆ ಹರಿದು ಸಾವು; ಮಾನವೀಯತೆ ಮೆರೆದ ಪೊಲೀಸರು!

- Advertisement -
- Advertisement -

ಮಂಗಳೂರು: ಕಾರೊಂದು ಸ್ಕೂಟರಿಗೆ ಡಿಕ್ಕಿಯಾದ ಪರಿಣಾಮ ರಸ್ತೆಗೆಸೆಯಲ್ಪಟ್ಟ ಸವಾರನ ಮೇಲೆ ಖಾಸಗಿ ಬಸ್ ಹರಿದು ಸ್ಕೂಟರ್ ಸವಾರ ಸಾವನ್ನಪ್ಪಿದ ಘಟನೆ ಎಕ್ಕೂರಿನಲ್ಲಿ ನಡೆದಿದೆ.

ತೊಕ್ಕೊಟ್ಟಿನಲ್ಲಿ ಬಾಡಿಗೆ ಮನೆ ಹೊಂದಿದ್ದ ನಿವಾಸಿ ಧೀಮಂತ್ ರಬೀಂದ್ರ ಸಾವನ್ನಪ್ಪಿದ ದುರ್ದೈವಿ. ಧೀಮಂತ್ ರಬೀಂದ್ರ ಮೂಲತ: ಅತ್ತಾವರದವರಾಗಿದ್ದು ತೊಕ್ಕೊಟ್ಟಿನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಮಂಗಳೂರಿನ ಮಾಲ್ ಒಂದರಲ್ಲಿ ಲೆನ್ಸ್ ಕಾರ್ಟ್ ಡಾಟ್ ಕಾಮ್ ಉದ್ಯೋಗಿಯಾಗಿದ್ದರು. ಇಂದು ಬೆಳಗ್ಗೆ ಅವರು ತೊಕ್ಕೊಟ್ಟಿನಿಂದ ಮಂಗಳೂರಿಗೆ ಸ್ಕೂಟರಲ್ಲಿ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ.

ayo

ಅಪಘಾತ ಆದ ಕೂಡಲೇ ಸ್ಥಳಕ್ಕೆ ಧಾವಿಸಿದ ಹೈವೇ ಪೆಟ್ರೋಲಿಂಗ್ ವಿಭಾಗದ ಟ್ರಾಫಿಕ್ ಪೊಲೀಸರು ಗಂಭೀರ ಗಾಯಗೊಂಡ ರಬೀಂದ್ರ ಅವರನ್ನು ತಮ್ಮ ಪೊಲೀಸ್ ವಾಹನದಲ್ಲೇ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ. ಇತ್ತೀಚಿಗೆ ಅನೇಕ ಕಡೆಗಳಲ್ಲಿ ಅಪಘಾತದ ಸಂದರ್ಭದಲ್ಲಿ ಟ್ರಾಫಿಕ್ ಪೊಲೀಸರು ಆಂಬುಲೆನ್ಸಿಗೆ ಕಾಯದೆ ತಮ್ಮ ವಾಹನದಲ್ಲೇ ಗಾಯಾಳುಗಳನ್ನು ತಕ್ಷಣಕ್ಕೆ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದು, ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.

- Advertisement -

Related news

error: Content is protected !!