Thursday, April 25, 2024
spot_imgspot_img
spot_imgspot_img

ಮಂಗಳೂರು: ಅಪ್ರಾಪ್ತ ಬಾಲಕಿಯನ್ನು ಬಳಸಿಕೊಂಡು ವೇಶ್ಯಾವಾಟಿಕೆ ದಂಧೆ-ಮಂಗಳೂರು ಪೊಲೀಸರಿಂದ ನಾಲ್ವರ ಬಂಧನ

- Advertisement -G L Acharya panikkar
- Advertisement -

ಮಂಗಳೂರು: ವೇಶ್ಯಾವಾಟಿಕೆ ದಂಧೆಯಲ್ಲಿ ಅಪ್ರಾಪ್ತ ಬಾಲಕಿಯನ್ನು ಬಳಸಿಕೊಂಡ ಕೃತ್ಯ ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ಬೆಳಕಿಗೆ ಬಂದಿದ್ದು ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ . ಆರೋಪಿಗಳ ವಿರುದ್ದ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ.

ಸುಳ್ಯದ ಕರಿಕ್ಕಳ ಪಂಬೆತ್ತಾಡಿ ನಿವಾಸಿ ಗುಲಾಬಿ ನಾಯ್ಕ್‌ (29), ಬ್ರಹ್ಮಾವರ ಕೀಳಿಂಜೆ ನಿವಾಸಿ ಶಶಿಧರ (42), ಕುಂದಾಪುರ ಹೊಸೂರು ನಿವಾಸಿ ಮಂಜುನಾಥ (26), ಉಡುಪಿಯ ರೋವೆಲ್‌ ಸೂರಜ್‌(47) ಬಂಧಿತ ಆರೋಪಿಗಳು.

ಹಳೆಯಂಗಡಿಯ ಮೂಲದ ಅಪ್ರಾಪ್ತ ಬಾಲಕಿಯನ್ನು ಬಳಸಿಕೊಂಡು ಗುಲಾಬಿ ನಾಯ್ಕ್‌ ಮತ್ತು ಸೂರಜ್‌ ಈ ಹೀನ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದರು. ಈ ಬಾಲಕಿಯ ಅಕ್ಕ ಹಾಗೂ ತಂಗಿ ಕೂಡ ಇದೇ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅಕ್ಕನ ಮೂಲಕ ಈ ಖದೀಮ ಪಿಂಪ್ ಗಳ ಪರಿಚಯ ನೊಂದ ಬಾಲಕಿಗೆ ಆಗಿತ್ತು ಎನ್ನಲಾಗಿದೆ.

ಹೈಟೆಕ್ ವೇಶ್ಯಾವಾಟಿಕೆಗೆ ಕುಖ್ಯಾತಿಗಳಿಸಿರುವ ಆಗಾಗ ಉಡುಪಿ ಮತ್ತು ಮಣಿಪಾಲದಲ್ಲಿ ಈ ಬಾಲಕಿಯನ್ನು ಬಳಸಿಕೊಳ್ಳಲಾಗುತಿತ್ತು. ಕಳೆದ ಬುಧವಾರವೂ ಪಿಂಪ್ ಗಳಾದ ಗುಲಾಬಿ ನಾಯ್ಕ್‌ ಮತ್ತು ಸೂರಜ್‌ಈ ಬಾಲಕಿಯನ್ನು ಒತ್ತಾಯದಿಂದ ಶಶಿ ಎಂಬವನೊಂದಿಗೆ ತೆರಳುವಂತೆ ಸೂಚಿಸಿದ್ದಾನೆ. ಆದರೆ ಆಕೆ ಈ ದಿನ ಬೇಡ, ‘ ನನಗೆ ಆಗುವುದಿಲ್ಲ ‘ ಎಂದು ಆಕೆ ನಿರಾಕರಿಸಿದ್ದಾಳೆ. ಇದರಿಂದ ಕುಪಿತರಾದ ಆರೋಪಿಗಳು ಕಾಪುವಿನ ಬಾರೊಂದರಲ್ಲಿ ಕುಡಿದಿದ್ದಾರೆ. ಈ ಸಂದರ್ಭ ಬಾಲಕಿಯೂ ಜತೆ ಇದ್ದಳು ಎನ್ನಲಾಗುತ್ತಿದೆ.

ಕುಡಿದು ಅಮೇಲೆರಿಸಿಕೊಂಡ ಆರೋಪಿಗಳು ಮತ್ತೆ ಶಶಿ ಜೊತೆ ತೆರಳುವಂತೆ ಒತ್ತಡ ಹಾಕಿದ್ದಾರೆ. ಈ ಸಂದರ್ಭ ಬಾಲಕಿ ತನ್ನ ಅಕ್ಕನಿಗೆ ಫೋನ್ ಮಾಡಿದ್ದಾಳೆ. ಆಗ ಬಾಲಕಿಯ ಫೋನ್ ಕಸಿದುಕೊಂಡ ಗುಲಾಬಿ ನಾಯ್ಕ ಬಾಲಕಿಯ ಅಕ್ಕನ ಜತೆ ಜಗಳ ಕಾದಿದ್ದಾನೆ. ಬಳಿಕ ಇತರ ಆರೋಪಿಗಳ ನೆರವಿನಿಂದ ಬಾಲಕಿಯನ್ನು ಬಲವಂತವಾಗಿ ಎತ್ತಾಕ್ಕಿಕೊಂಡು ಹಲ್ಲೆ ನಡೆಸಿ, ಲೈಂಗಿಕ ಕಿರುಕುಳ ನೀಡಿದ್ದಾರೆ. ಹಾಗೂ ಕಾರಿನಲ್ಲಿಯೇ ಲೈಂಗಿಕವಾಗಿಯೂ ಬಳಸಿಕೊಂಡಿದ್ದಾರೆ.

ಘಟನೆಯೂ ತಡ ರಾತ್ರಿ ನಡೆದ ಕಾರಣ ರಸ್ತೆಯಲ್ಲಿ ಜನ ಸಂಚಾರವೂ ವಿರಳವಾಗಿತ್ತು . ಇದನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡ ಆರೋಪಿಗಳು ಬಾಲಕಿಯ ವಿರುದ್ದ ತಮ್ಮ ವಿಕೃತಿಯನ್ನು ತೀವ್ರವಾಗಿಗೊಳಿಸಿದ್ದಾರೆ ಕಟಪಾಡಿ ಬಳಿ ಕಾರು ಬರುತ್ತಿರುವಾಗ ಅಪ್ರಾಪ್ತ ಯುವತಿ ರಕ್ಷಿಸುವಂತೆ ಜೋರಾಗಿ ಕಿರುಚಿಕೊಂಡಿದ್ದಾಳೆ. ಕೂಡಲೇ ಜಾಗೃತವಾದ ಸಾರ್ವಜನಿಕರು ಕಾರನ್ನು ಅಡ್ಡಕಟ್ಟಿದ್ದಾರೆ ಮತ್ತು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆಗ ಅಪ್ರಾಪ್ತೆಯ ಬಳಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಪ್ರಕರಣ ಹೊರಬಿದ್ದಿದೆ.

- Advertisement -

Related news

error: Content is protected !!